ಶಿವಮೊಗ್ಗ : ಭದ್ರಾ ಆಣೆಕಟ್ಟಿನ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯಲು ಸುಮಾರು 9,36,000 ಲಕ್ಷ ಹಣ ಮಂಜೂರಾಗಿದ್ದು, ಈ ಒಂದು ಹಣ ಮಂಜೂರು ಮಾಡಲು ಗುತ್ತಿಗೆದಾರನಿಂದ 1.20 ಲಕ್ಷ ಹಣ ಲಂಚ ಸ್ವೀಕರಿಸುತ್ತಿರುವಾಗಲೇ ನೀರಾವರಿ ನಿಗಮದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ದಾಳಿಯ ವೇಳೆ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಇನ್ನು ಬಂಧನಕ್ಕೆ ಒಳಗಾದಂತಹ ಅಧಿಕಾರಿಗಳನ್ನು,ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ ಹಾಗೂ ಅರವಿಂದ್ ಎಂದು ತಿಳಿದುಬಂದಿದೆ.ಭದ್ರಾ ಅಣೆಕಟ್ಟೆಯ ಗೊಂದಿ ಬಲದಂಡೆ ನಾಲೆಯ ಸಿಲ್ಟ್ ತೆಗೆಯಲು ಕಾಮಗಾರಿ ಟೆಂಡರ್ ಕರೆಯಲಾಗಿತ್ತು. ಕಳೆದ 2024ರ ಜನವರಿಯಲ್ಲಿ ಕಾಮಗಾರಿಯೂ ಪೂರ್ಣಗೊಂಡಿತ್ತು. ಆದರೆ ಟೆಂಡರ್ ಹಣ 9,36,000ಲಕ್ಷ ರೂ ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ.
ಹಣ ಮಂಜೂರಾತಿಗೆ ಗುತ್ತಿಗೆದಾರ ರವಿ ಅವರು ಹಲವಾರು ಬಾರಿ ಮನವಿ ಮಾಡಿದ್ದರು. ಆದರೆ ಹಣ ಮಂಜುರು ಮಾಡಲು ನೀರಾವರಿ ನಿಗಮದ ಸೆಕ್ಷನ್ ಆಫೀಸರ್ ಕೊಟ್ರಪ್ಪ 1.20 ಲಕ್ಷ ಲಂಚಕ್ಕೆ ಬಿಡಿಕೆ ಇಟ್ಟಿದ್ದರು.ಈ ವಿಚಾರವಾಗಿ ಗುತ್ತಿಗೆದಾರ ರವಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರನ್ನು ನೀಡಿದ್ದರು.ಕೊಟ್ರಪ್ಪ ಅವರ ಕಚೇರಿಯ ಲೈಟ್ ಮಜದೂರ್ ಅರವಿಂದ ಎಂಬುವವರಿಂದ ಕೊಟ್ರಪ್ಪ 1.20 ಲಕ್ಷ ರೂ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೊಟ್ರಪ್ಪ ಹಾಗೂ ಅರವಿಂದ ಇಬ್ಬರನ್ನೂ ಬಂಧಿಸಿದ್ದಾರೆ.