ಬೆಂಗಳೂರು : ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗುವ ಆತಂಕ ಶುರುವಾಗಿದ್ದು, ಲೋಕಾಯುಕ್ತರೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಲೋಕಾಯುಕ್ತ ಎಸ್ ಪಿ ರಿಲೀವ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅಲ್ಲದೇ ಅಕ್ರಮದಲ್ಲಿ ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳ ಹೆಸರು ಕೂಡ ತಳಕು ಹಾಕಿಕೊಂಡಿದೆ. ಇಬ್ಬರು ಸಚಿವರ ಆಪ್ತ ಕಾರ್ಯದರ್ಶಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಗುಮಾನಿ ಹಬ್ಬಿದ್ದು,, ಇಬ್ಬರು ಸಚಿವರ ಪಿಎ ಗಳ ಹೆಸರನ್ನು ಲೋಕಾಯುಕ್ತ ಎಸ್ ಪಿ ಬಂಧನಕ್ಕೂ ಮುನ್ನ ಉಲ್ಲೇಖಿಸಿದ್ದಾರೆ. ಅಲ್ಲದೆ ಸಚಿವರ ಪಿಎಗಳು ಅಕ್ರಮದಲ್ಲಿ ಕೈಜೋಡಿಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.
ಈ ಒಂದು ಅಕ್ರಮ ಪ್ರಕರಣ ಸರ್ಕಾರದ ವಿರುದ್ಧ ವಿಪಕ್ಷಕ್ಕೆ ಇದೀಗ ಮತ್ತೊಂದು ಅಸ್ತ್ರ ದೊರೆಯುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲೂ ಮುಜುಗರ ಉಂಟಾಗಿತ್ತು. ಲೋಕಾಯುಕ್ತರೆ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಮುಜುಗರ ಉಂಟಾಗಿತ್ತು. ಇದೀಗ ಸಚಿವರ ಆಪ್ತ ಕಾರ್ಯದರ್ಶಿಗಳ ಪಾತ್ರದ ಬಗ್ಗೆ ಗುಮಾನಿ ಹಬ್ಬಿದೆ. ಸಚಿವರ ಹೆಸರು ಬಹಿರಂಗಗೊಂಡರೆ ಮತ್ತಷ್ಟು ಸರ್ಕಾರಕ್ಕೆ ಮತ್ತಷ್ಟು ಮುಜುಗರ ಆಗಲಿದೆ.