ದಾವಣಗೆರೆ : ಟೈಲ್ಸ್ ಸಾಗಿಸುತ್ತಿದ್ದ ಟಾಟಾಏಸ್ ವಾಹನ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿ NH 48 ರಲ್ಲಿ ಈ ಒಂದು ಅಪಘಾತ ಸಂಭವಿಸಿದೆ.
ಮಿತಿಗಿಂತ ಅಧಿಕ ವಸ್ತುಗಳನ್ನು ತುಂಬಿದ್ದರಿಂದ ಟಾಟಾಏಸ್ ವಾಹನದ ಟೈರ್ ಸ್ಫೋಟಗೊಂಡು ಕೋಲ್ಕುಂಟೆ ಗ್ರಾಮದ ಮಹದೇವ (38) ಯರವನಾಗತಿಹಳ್ಳಿ ಕ್ಯಾಂಪ್ನ ಹನುಮಂತ (37) ಮತಪಟ್ಟ ಕಾರ್ಮಿಕರು ಎಂದು ತಿಳಿದುಬಂದಿದೆ. ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಇದೀಗ ಧರಣಿ ನಡೆಸಲಾಗುತ್ತಿದೆ.ದಾವಣಗೆರೆ ಹದಡಿ ರಸ್ತೆಯ ಸಮ್ಯಕ್ ಸಿರಾಮಿಕ್ ಮುಂದೆ ಮೃತರ ಶವವಿಟ್ಟು ಧರಣಿ ನಡೆಸಲಾಗುತ್ತಿದೆ.
ಟೈಲ್ಸ್ ಮತ್ತು ಇಂಟೀರಿಯರ್ ಶಾಪ್ ಮುಂದೆ ಕಾರ್ಮಿಕರ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಪ್ ಮಾಲಿಕ ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರ ನಡುವೆ ಈ ವೇಳೆ ವಾಗ್ವಾದ ನಡೆಯಿತು. ಪರಿಹಾರ ಸಿಗುವವರೆಗೂ ಕಾರ್ಮಿಕರ ಶುಭ ಕೊಂಡಯ್ಯೆಲ್ಲವೆಂದು ಆಕ್ರೋಶ ಹೊರಹಾಕಿದರು ಪ್ರತಿಭಟನಾ ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.