ಕೊಪ್ಪಳ : ಕೊಪ್ಪಳದಲ್ಲಿ ಇಂದು ಭೀಕರವಾದ ರಸ್ತೆ ಅಪಘಾತ ಸಂಭವಿಸಿದ್ದು, ಮರಳು ತುಂಬಿದ ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರು ಸಾವನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಈ ಒಂದು ಅಪಘಾತ ನಡೆದಿದೆ.
ಮೃತಪಟ್ಟವರನ್ನು ರಮೇಶ್ (27) ಸಿದ್ದಪ್ಪ (34) ಎಂದು ತಿಳಿದುಬಂದಿದೆ. ಯುವಕರು ಕನಕಗಿರಿ ತಾಲೂಕಿನ ಗುಡೂರಿನ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಅಕ್ರಮ ಮರಳು ದಂಧೆಗೆ ಯುವಕರಿಬ್ಬರು ಬಲಿ ಆಗಿರುವ ಆರೋಪ ಕೇಳಿ. ಬರುತ್ತಿದೆ. ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಜನರು ಆಗ್ರಹಿಸುತ್ತಿದ್ದಾರೆ. ಅಪಘಾತದ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.