ಬೀದರ್ : ಬೀದರ ಜಿಲ್ಲೆಯ ಹುಮ್ನಾಬಾದ್ ನಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಿಷನಿಲ ಸೋರಿಕೆ ಯಾಗಿ ಇಬ್ಬರು ವ್ಯಕ್ತಿಗಳು ದಾರುಣವಾಗಿ ಸಾವನಪ್ಪಿದ್ದು, ಕೆಮಿಕಲ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟು ಜನ ಕಾರ್ಮಿಕರು ತೀವ್ರವಾಗಿ ಅಸ್ವಸ್ಥ ಗೊಂಡಿರುವ ಘಟನೆ ಜರುಗಿದೆ.
ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯಿಂದ ಇಬ್ಬರು ವ್ಯಕ್ತಿಗಳ ಸಾವನ್ನಪ್ಪಿದ್ದು, ಹುಮ್ನಾಬಾದ್ ಬಳಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.ಬೀದರ ಜಿಲ್ಲೆಯ ಹುಮ್ನಾಬಾದ್ ಬಳಿ ಇರುವ ಕೆಮಿಕಲ್ ಕಾರ್ಖಾನೆಯಲ್ಲಿ ವಿಷ ಅನಿಲ ಸೋರಿಕೆಯಿಂದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮಧ್ಯಪ್ರದೇಶದ ಮೂಲದ ಕಾರ್ಮಿಕರು ಎಂದು ಹೇಳಲಾಗುತ್ತಿದೆ. ಮೊಹಮ್ಮದ್ ಶಾಬಾದ್ (21) ಇಂದ್ರಜಿತ್ (23) ಎನ್ನುವ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಎಂಟು ಕಾರ್ಮಿಕರು ಅಸ್ವಸ್ಥವಾಗಿದ್ದು ತಾಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಘಟನೆ ಕುರಿತಂತೆ ಹುಮ್ನಾಬಾದ್ ನಗರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.