ಕಲಬುರ್ಗಿ : ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದು ಅಲ್ಲದೆ ಇಬ್ಬರನ್ನು ಅಪಹರಣ ಮಾಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಕೂಡಲ ಹಂಗರಗ ಗ್ರಾಮದಲ್ಲಿ ನಡೆದಿದೆ ಈ ಕುರಿತು ಂದ್ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣದ ದಾಖಲಾಗಿದೆ.
ಅಪಹರಣಕ್ಕೆ ಒಳಗಾದಂತಹ ಗ್ರಾಮ ಪಂಚಾಯಿತಿ ಸದಸ್ಯರನ್ನು, ರಾಜಶೇಖರ ಕಾಂದೆ ಮತ್ತು ಅನಂತ ರೆಡ್ಡಿ ಎಂದು ತಿಳಿದುಬಂದಿದೆ.ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಲು ನಿರ್ಣಯಿಸಿದ್ದರು.ಹಾಗಾಗಿ ಎಲ್ಲ ಸದಸ್ಯರು ಶಹಾಬಾದ್ ಸಮೀಪದ ತರಿ ತಾಂಡಾಕ್ಕೆ ತೆರಳಿದ್ದರು ಎಂದರು.
ತಾಂಡಾದ ಅನಿಲ್ ರಾಠೋಡ ಮನೆಯಲ್ಲಿ ಇದ್ದಾಗ ವಿಜಯ ಹಳ್ಳಿ, ರಾಜಕುಮಾರ ಸೇರಿ ಸುಮಾರು 40 ಜನರ ಗುಂಪಿನೊಂದಿಗೆ ಬಂದರು. ಹಲ್ಲೆ ಮಾಡಿ, ಚಾಕು ತೋರಿಸಿ, ಜೀವ ಬೆದರಿಕೆ ಹಾಕಿ ಇಬ್ಬರನ್ನು ಅಪಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ತಿಳಿಸಿದ್ದಾರೆ.