ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ಬಾಲಕಿಯರು ಇಬ್ಬರು ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಿನ್ನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಕುರುಪ್ಪಲ್ಲಿ ಗ್ರಾಮದಲ್ಲಿ ಈ ಒಂದು ಘೋರ ಘಟನೆ ನಡೆದಿದ್ದು ಮೃತ ಬಾಲಕಿಯರನ್ನು ರಾಧಮ್ಮ (17), ಸಾಹಿತಿ (14) ಎಂದು ತಿಳಿದುಬಂದಿದೆ. ಚೇಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತಪಟ್ಟ ಬಾಲಕಿಯರು ಕುರುಪ್ಪಲ್ಲಿ ಗ್ರಾಮದವರು. ರಾಧಮ್ಮ ಆದಿನಾರಾಯಣರೆಡ್ಡಿ ಎಂಬವರ ಪುತ್ರಿ. ಬಾಗೇಪಲ್ಲಿಯ ನ್ಯಾಷನಲ್ ಕಾಲೇಜ್ ಪಿಯುಸಿ ವಿದ್ಯಾರ್ಥಿನಿ. ಸಾಹಿತಿ ರಾಮಲಿಂಗ ರೆಡ್ಡಿ ಎಂಬವರ ಪುತ್ರಿ. ಇವರು ಆದರ್ಶ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.