ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ವ್ಯಕ್ತಿಯಿಂದ ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಬ್ಲಡ್ಲರ್‌ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬಂಧಿತ ಆರೋಪಿಗಳನ್ನು ಸೈಯದ್ ಹಾಗೂ ದಾಹುದ್ ಪರ್ವೆಜ್ ತಿಳಿದು ಬಂದಿದೆ. ನೈಜೀರಿಯಾ ವ್ಯಕ್ತಿಯಿಂದ ಆರೋಪಿಗಳು ಡ್ರಗ್ಸ್ ತಂದು ಮಾರಾಟ ಮಾಡುತ್ತಿದ್ದರು. ಎಂದು ಹೇಳಲಾಗುತ್ತಿದೆ.
ಬಂಧಿತ ಆರೋಪಿಗಳ ಬಳಿ ಇದ್ದ 225 ಗ್ರಾಂ MDMA ಕ್ರಿಸ್ಟಲ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.