ಉತ್ತರಕನ್ನಡ : ಇಂದು ರಾಜ್ಯದಲ್ಲಿ ಅತ್ಯಂತ ಘೋರವಾದ ಘಟನೆಗಳು ನಡೆದಿದ್ದು, ರಾಮನಗರ ಜಿಲ್ಲೆಯಲ್ಲಿ ಈಜಲು ತೆರಳಿದ್ದ ಮೂರು ಬಾಲಕರು ಸಾವನ್ನಪ್ಪಿದ್ದು, ಇದೀಗ ಹೊಳೆಯಲ್ಲಿ ಸ್ಥಾನಕ್ಕೆಂದು ಹೋಗಿದ್ದ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ನಡೆದಿದೆ.
ಹೌದು ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಸಾವನನಪಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಈ ಘಟನೆ ಸಂಭವಿಸಿದೆ. ಸೂರಜ ನಾಯಕ (15) ಪಾರ್ವತಿ ಶಂಕರ ನಾಯಕ್ (35) ಎನ್ನುವವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇವರು ಭಟ್ಕಳ ತಾಲೂಕಿನ ಕೊಂಡಕೋಡ್ಲು ಗ್ರಾಮದವರು ಎಂದು ತಿಳಿದುಬಂದಿದೆ.
ಅಲ್ಲದೆ ಇವರ ಜೊತೆಗೆ ಸುಮಾರು ಹದಿನೈದು ಜನರು ಹೊಳೆಯಲ್ಲಿ ಸ್ಥಾನಕ್ಕೆಂದು ತೆರಳಿದ್ದರು ಎಂದು ಹೇಳಲಾಗುತ್ತಿದೆ. ಸ್ನಾನ ಮಾಡಲು ಹೋದಾಗ ಈ ದುರಂತ ಸಂಭವಿಸಿದೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.