ಉಡುಪಿ : ಡ್ಯಾಮ್ ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆಯ ಗುಮ್ಮಲ ಡ್ಯಾಂನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ವೆಯ ಗ್ರಾಮದಲ್ಲಿ ಈಜುಲು ಹೋದ ಇಬ್ಬರು ಬಾಲಕರು ನೀರು ಪಾಲಾಗಿ ಮುಳುಗಿ ಸಾವನ್ನಪ್ಪಿದ್ದರೆ. ಮೃತರನ್ನು ಶ್ರೀಶ (13) ಹಾಗೂ ಜಯಂತ್ (19) ಎಂದು ತಿಳಿದು ಬಂದಿದೆ.ರಜೆ ಹಿನ್ನೆಲೆಯಲ್ಲಿ ಗೆಳೆಯರ ಜೊತೆಗೆ ಇಬ್ಬರು ಈಜಲು ಹೋಗಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.