ಕಲಬುರ್ಗಿ : ಕಲಬುರ್ಗಿಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದ್ದು, ಗಾಣಗಾಪುರದ ಸಂಗಮದಲ್ಲಿ ಅಷ್ಟ ತೀರ್ಥದಲ್ಲಿ ಸ್ಥಾನಕ್ಕೆ ಎಂದು ತೆರಳಿದ್ದ ಬಾಲಕರು ಇಬ್ಬರು ಸಾವನಪ್ಪಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಗಣಕಾಪುರದ ಸಂಗಮದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಗಾಣಗಾಪುರದ ಸಂಗಮದಲ್ಲಿ ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿದ್ದ ಬಾಲಕರಿಬ್ಬರು ಸಾವನ್ನಪ್ಪಿದ್ದು, ಅಷ್ಟ ತೀರ್ಥದಲ್ಲಿ ಸ್ನಾನಕ್ಕೆ ತೆರಳಿದ್ದಾಗ ಈ ಒಂದು ದುರಂತ ಸಂಭವಿಸಿದೆ. ಪ್ರಕಾಶ್(15) ಹಾಗೂ ಸೋನು (16) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಸ್ನಾನ ಮಾಡುವಾಗ ಸೋನು ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಈ ವೇಳೆ ಸೋನುನನ್ನು ಕಾಪಾಡಲು ಹೋಗಿದ್ದ ಪ್ರಕಾಶ್ ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, SDRF ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗಾಣಗಾಪುರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.