ದಕ್ಷಿಣಕನ್ನಡ : ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು ಬಂಧಿತ ಆರೋಪಿಗಳನ್ನ ಭರತ್ ಅಲಿಯಾಸ್ ರಕ್ಷಿತ್, ಹಾಗೂ ದಿನೇಶ್ ಕುರ್ತಾ ಎಂದು ಹೇಳಲಾಗುತ್ತಿದೆ. ಸಿಸಿ ಕ್ಯಾಮೆರಾ ದೃಶ್ಯದ ಆಧಾರದಲ್ಲಿ ಇಬ್ಬರು ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ. ರಾಜ್ಯಪಾಲರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಎಂಎಲ್ಸಿ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೇಸೆದಿರುವಾಗಿ ಇದೀಗ ತಪ್ಪು ಒಪ್ಪಿಕೊಂಡಿದ್ದಾರೆ. ಪೊಲೀಸರ ವಿಚಾರಣೆ ಭರತ್ ಮತ್ತು ದಿನೇಶ್ ತಪ್ಪನ್ನು ಒಪ್ಪಿಕೊಂಡಿದ್ದಾರೆ.ಭರತ್ ವಿರುದ್ಧ ಈ ಹಿಂದೆ ಹಲ್ಲೆ ಆರೋಪದ ಅಡಿ ಇದುವರೆಗೂ 3 ಪ್ರಕರಣಗಳು ದಾಖಲಾಗಿವೆ.
ಭರತ್ ಬಂಟ್ವಳ ತಾಲೂಕಿನ ಬೋಳಂತೂರಿನ ರಾಘವ ಭಂಡಾರಿ ಪುತ್ರನಾಗಿದ್ದು, ಇನ್ನೂ ದಿನೇಶ್ ಕನ್ಯಾನದಲ್ಲಿ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಬಂಟ್ವಾಳ ತಾಲೂಕಿನ ಕೋಲ್ನಾಡು ಗ್ರಾಮದ ಆನಂದ್ ಪೂಜಾರಿ ಪುತ್ರ ದಿನೇಶ್ ಎಂದು ಹೇಳಲಾಗುತ್ತಿದೆ. ಮಂಗಳೂರು ದಕ್ಷಿಣ ವಿಭಾಗದ ಪೊಲೀಸರಿಂದ ಭರತ್ ಹಾಗು ದಿನೇಶ್ ನನ್ನು ಬಂಧಿಸಲಾಗಿದೆ.