ಬೆಂಗಳೂರು : ಬಿಡದಿಯ ಕಾರ್ಖಾನೆಯಲ್ಲಿ ಪಾಕಿಸ್ತಾನದ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಉತ್ತರ ಕರ್ನಾಟಕದ ಹೈಮದ್ ಹುಸೈನ್ (24) ಮತ್ತು ಸಾಧಿಕ್ (20) ಎನ್ನುವ ಆರೋಪಿಗಳನ್ನು ಬಿಡದಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಟಯೋಟೊ ಬಿಷೋಕೋ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಬರಹ ಬರೆಯಲಾಗಿತ್ತು ಕನ್ನಡಿಗರ ಬಗ್ಗೆಯೂ ಕೂಡ ಅವಹೇಳನ ಪದ ಬಳಕೆ ಮಾಡಿದ್ದರು. ದೇಶದ್ರೋಹದ ಆರೋಪದ ಅಡಿ ಇದೀಗ ಹುಸೇನ್ ಮತ್ತು ಸಾಧಿಕ್ ನನ್ನು ಬಿಡದಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರ್ಖಾನೆಯಲ್ಲಿ ಇಬ್ಬರೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ?
ಪಾಕಿಸ್ತಾನಕ್ಕೆ ಜೈ’ ಎಂದು ಬರೆದಿರುವ ಜೊತೆಗೆ ಅವಾಚ್ಯ ಶಬ್ದಗಳಿಂದ ಕನ್ನಡಿಗರನ್ನು ನಿಂದಿಸಿದ್ದಾರೆ. ಬಿಡದಿಯ ಪ್ರತಿಷ್ಠಿತ ಕಂಪನಿಯ ಶೌಚಾಲಯದ ಗೋಡೆ ಮೇಲೆ ಬರೆದಿರುವ ಈ ಕೃತ್ಯವು ಮಾರ್ಚ್ 15 ರಂದು ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಡದಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಈ ರೀತಿಯ ಬರವಣಿಗೆಗಳು ಅಶಾಂತಿ ಸೃಷ್ಟಿಸುವ ಜೊತೆಗೆ ಸಂಸ್ಥೆಯಲ್ಲಿ ತೀವ್ರ ಆಶಿಸ್ತಿನ ಬೆಳವಣೆಗೆಗೂ ಕಾರಣವಾಗುತ್ತದೆ. ಈ ರೀತಿಯ ಬರವಣಿಗೆಗಳು ದೇಶದ ಕಾನೂನಿನ ಚೌಕಟ್ಟಿನಲ್ಲಿ ದೇಶದ್ರೋಹಿ ಅಪರಾಧಗಳಡಿ ಬರುತ್ತದೆ. ಈ ರೀತಿ ಕೃತ್ಯಗಳು ಮುಂದುವರಿದರೆ ಪೊಲೀಸರ ಗಮನಕ್ಕೆ ತಂದು ಘಟನೆಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಲಾಗುವುದು. ಬೆರಳಚ್ಚು ಹಾಗೂ ಬರವಣಿಗೆ ತಜ್ಞರ ಗಮನಕ್ಕೆ ತಂದು ಈ ಕೃತ್ಯ ಎಸಗಿದವರನ್ನು ಕಂಡುಹಿಡಿದು ಕಠಿಣ ಶಿಕ್ಷೆ ಕೊಡಿಸಲಾಗುವುದು ಎಂದು ಆಡಳಿತ ಮಂಡಳಿಯು ಎಚ್ಚರಿಸುವ ಮೂಲಕ ಸುತ್ತೋಲೆ ಹೊರಡಿಸಿತ್ತು.