ಕಲಬುರ್ಗಿ : ನಿನ್ನೆ ಕಲಬುರ್ಗಿಯಲ್ಲಿ ನೀಟ್ ಪರೀಕ್ಷೆಯ ವೇಳೆ ಅಧಿಕಾರಿಗಳು ವಿದ್ಯಾರ್ಥಿಯಿಂದ ಜನಿವಾರ ತೆಗೆಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಈ ಕುರಿತು ಈಗಾಗಲೇ ಇಬ್ಬರೂ ಸಿಬ್ಬಂದಿಗಳನ್ನು ಅರೆಸ್ಟ್ ಮಾಡಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ಸಿಬ್ಬಂದಿಗಳು ನಾವು ಯಾವುದೇ ವಿದ್ಯಾರ್ಥಿಗೂ ಜನಿವಾರ ತೆಗೆಯಿರಿ ಎಂದು ಹೇಳಿಯೇ ಇಲ್ಲ ಎಂದು ತಿಳಿಸಿದ್ದಾರೆ.
ಸಿಬ್ಬಂದಿಗಳು ಹೇಳುವ ಪ್ರಕಾರ, ಪರೀಕ್ಷೆ ಬರೆಯಲು ಬಂದ ಎಲ್ಲ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಿ ನೀಟ್ ಪರೀಕ್ಷಾ ನಿಯಮಗಳನ್ನು ತಿಳಿಸಿದೆವು. ಬಳಿಕ, ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಡಿಸಿದೆವು. ಈ ವೇಳೆ, ವಿದ್ಯಾರ್ಥಿಗಳು ತಮ್ಮ ಕೈ ಯಲ್ಲಿ ಕಟ್ಟಿರುವ ದಾರ, ಕೊರಳಲ್ಲಿನ ತಾಯತಗಳನ್ನು ತೆಗೆದರು. ಎಲ್ಲ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಚಿಹ್ನೆಗಳನ್ನು ತೆಗೆಯುತ್ತಿದ್ದಾರೆ.
ಈ ವೇಳೆ ಎಲ್ಲ ವಿದ್ಯಾರ್ಥಿಗಳು ತಮ್ಮ ಧಾರ್ಮಿಕ ಚಿಹ್ನೆಗಳನ್ನು ತೆಗೆಯುತ್ತಿದ್ದಂತೆ ಶ್ರೀಪಾದ ಪಾಟೀಲ್ ಕೂಡ ಜನಿವಾರ ತೆಗೆದಿದ್ದಾನೆ. ನಾವು ಜನಿವಾರ ತೆಗೆದಿಡು ಅಂತ ಹೇಳಿಲ್ಲ. ತಾನಾಗಿಯೇ ತೆಗೆದಿದ್ದಾನೆ. ಬೇರೆ ಯಾವ ಬ್ರಾಹ್ಮಣ ವಿದ್ಯಾರ್ಥಿ ಕೂಡ ಜನಿವಾರ ತೆಗೆದಿಲ್ಲ. ನಾವು ಜನಿವಾರ ತೆಗೆಸುತ್ತಿರಲಿಲ್ಲ. ಶ್ರೀಪಾದ ಪಾಟೀಲ್ ಜನಿವಾರ ತೆಗೆದು, ಬಳಿಕ ಹೊರಗೆ ಹೋಗಿ ತಮ್ಮ ತಂದೆಯವರಿಗೆ ನೀಡಿದ್ದಾರೆ ಪರೀಕ್ಷಾ ಕೇಂದ್ರ ಸಿಬ್ಬಂದಿ ಹೇಳಿದ್ದಾರೆ.
ಪ್ರಕರಣ ಸಂಬಂಧಪಟ್ಟ ವಿದ್ಯಾರ್ಥಿ ಶ್ರೀಪಾದ ಪಾಟೀಲ್ ದೂರಿನ ಅನ್ವಯ ಇಬ್ಬರು ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದ್ದು, ಬಳಿಕ ಇಬ್ಬರನ್ನು ಬಂಧಿಸಲಾಗಿದೆ ಎಂದು ಕಲ್ಬುರ್ಗಿ ಕಮಿಷನರ್ ಡಾ.ಶರಣಪ್ಪ ಹೇಳಿಕೆ ನೀಡಿದ್ದಾರೆ. ಇದೀಗ ಸಿಬ್ಬಂದಿಗಳು ಈ ರೀತಿ ಹೇಳಿಕೆ ನೀಡಿರುವುದರಿಂದ ಈ ಒಂದು ಪ್ರಕರಣ ಯಾವ ರೀತಿ ಮತ್ತೆ ತಿರುವು ಪಡೆದುಕೊಳ್ಳುತ್ತದೆ ಎನ್ನುವುದು ಕಾದು ನೋಡಬೇಕು.