ಬೆಂಗಳೂರು : ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾಳೆ. ಅಲ್ಲದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾಳೆ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮಹಿಳೆಗೆ ಬಸವ ಜಯ ಮೃತ್ಯುಂಜಯ ಶ್ರೀ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಪ್ರಿಲ್ ನಾಲ್ಕರಂದೇ ಮಹಿಳೆ ಸೇರಿ ನಾಲ್ವರ ವಿರುದ್ಧ ಸ್ವಾಮೀಜಿ ದೂರು ನೀಡಿದ್ದರು ಫೆಬ್ರವರಿ 11ರಂದು ಹಲ್ಲೆ ಮಾಡಿದ್ದಾರೆ. ಎಂದು ಸ್ವಾಮೀಜಿ ದೂರು ನೀಡಿದ್ದಾರೆ. ವಿಜಯಪುರ ತಾಲೂಕಿನ ಕಗ್ಗೊಡ ಬಳಿ ನನಗೆ ಹಲ್ಲೆ ಮಾಡಿದ್ದಾರೆ ಎಂದು ಸ್ವಾಮೀಜಿ ದೂರು ನೀಡಿದ್ದಾರೆ. ವಿಜಯಪುರ ಗ್ರಾಮಾಂತರ ಠಾಣೆಗೆ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ.
ಬೆಂಗಳೂರು ಮೂಲದ ತ್ರಿವೇಣಿ, ಪೃಥ್ವಿ ಗೌಡ, ಯಶವಂತ ಹಾಗೂ ಸ್ಪೀಡ್ ನ್ಯೂಸ್ ಎಂಡಿ ವೀರೇಶ್ ವಿರುದ್ಧ ಜಯ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ. ಎರಡು ಮೂರು ವರ್ಷಗಳ ಹಿಂದೆ ಬೆಂಗಳೂರಿನ ತ್ರಿವೇಣಿ ನನ್ನನ್ನು ಭೇಟಿಯಾಗಿದ್ದಳು. ನಾನು ಲಿಂಗಾಯತ ಸಮಾಜದವಳು ಆಶ್ರೀತ ಫೌಂಡೇಶನ್ ಮುಖ್ಯಸ್ಥೆ ಎಂದು ಹೇಳಿದಳು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತೇನೆ ಎಂದು ನನ್ನನ್ನು ಭೇಟಿಯಾಗಿದ್ದಳು. ಪಂಚಮಸಾಲಿ ಹೋರಾಟಕ್ಕೂ ಸಾತ್ ನೀಡುತ್ತೇನೆ ಎಂದು ಹೇಳಿದಳು.
ನಂತರ ಫೌಂಡೇಶನ್ ಗಾಗಿ ಹಣ ನೀಡಬೇಕು ಎಂದು ಆಕೆ ಬೇಡಿಕೆ ಇಟ್ಟಿದ್ದಳು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ನಾನು ಆಕೆ ಹೇಳಿದೆ. ನಂತರ ಹಣಕ್ಕಾಗಿ ಬೆಂಗಳೂರು ಮೂಲದ ತ್ರಿವೇಣಿ ಪೀಡಿಸುತ್ತಿದ್ದಳು. ಹಣ ನೀಡದ ಕಾರಣದ ಇಲ್ಲದ ಆರೋಪ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಫೆಬ್ರವರಿ 11ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ನನ್ನ ವಾಹನ ಡಗಟ್ಟಿ ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್ ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ.
ಈ ವೇಳೆ ಬೆಂಗಾಗಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ನನ್ನ ಶಿಷ್ಯ ರಾಜಕುಮಾರಗೆ ಕರೆ ಮಾಡಿ ಮೂರು ಕೋಟಿ ರೂಪಾಯಿಗೆ ಬೇಡಿಕೆಟ್ಟಿದ್ದಾಳೆ ಹಣ ನೀಡದಿದ್ದರೆ ಕೆಟ್ಟದಾಗಿ ಪ್ರಸಾರ ಮಾಡುತ್ತೇನೆ ಎಂದು ಹೇಳಿದ್ದಾಳೆ ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ತ್ರಿವೇಣಿ ಬೆದರಿಕೆ ಹಾಕಿದ್ದಾಳೆ ಪಂಚಮಸಾಲಿ ಹೋರಾಟ ತಿಕ್ಕಲು ತೇಜೋವಧೆ ಮಾಡುತ್ತಿದ್ದಾರೆ ಆ ಕಾರಣಕ್ಕೆ ಬೆಂಗಳೂರು ಮೂಲದ ತ್ರಿವೇಣಿ ಪೃಥ್ವಿ ಗೌಡ ಯಶವಂತ್ ಹಾಗೂ ಸ್ಪೀಡ್ ನ್ಯೂಸ್ ವಿರುದ್ಧ ದೂರು ನೀಡಿದ್ದೇನೆ ಎಂದು ಶ್ರೀಗಳು ತಿಳಿಸಿದರು.








