ಉತ್ತರಪ್ರದೇಶ : ಆನ್ಲೈನ್ ಗೇಮ್ ಗೀಳಿಗೆ ಮೂವರು ಬಾಲಕಿಯರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಒಬ್ಬ ಸಹೋದರಿಯನ್ನು ಉಳಿಸಲು ಹೋಗಿ ಇಬ್ಬರು ಸಹೋದರಿಯರು ಬಲಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಅರುಣ್ ಕುಮಾರ್ ಎಂಬಾತ ಸ್ಪೋಟಕವಾದ ಸಂಗತಿ ಬಿಚ್ಚಿಟ್ಟಿದ್ದಾರೆ.
ಹೌದು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಆನ್ಲೈನ್ ಗೇಮ್ ಗಿಳಿಗೆ ಮೂವರು ಬಾಲಕಿಯರು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆದರೆ ಇದೀಗ ಈ ಒಂದು ಪ್ರಕರಣಕ್ಕೆ ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದು ಒಬ್ಬ ಸಹೋದರಿಯನ್ನು ಉಳಿಸಲು ಹೋಗಿ ಮತ್ತಿಬ್ಬರು ಬಲಿಯಾಗಿದ್ದಾರೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ.
ಪ್ರತ್ಯಕ್ಷ ದರ್ಶಿ ಅರುಣ್ ಕುಮಾರ್ ಅವರು ಹೇಳಿರುವ ಪ್ರಕಾರ ರಾತ್ರಿ 2ರ ಸುಮಾರಿಗೆ ಮನೆಯಲ್ಲಿ ಲೈಟ್ ಹಾಕಿದ್ದರು ನಾನು ಮಲಗುವ ಮುನ್ನ ಹೊರಗಡೆ ಬಂದು ಗಮನಿಸಿದೆ. ಬಾಲಕಿ ರೈಲಿಂಗ್ ಮೇಲೆ ಕುಳಿತು ಬೀಳಲು ಯತ್ನಿಸುತ್ತಿದ್ದಳು. ಆದರೆ ಮತ್ತೊಬ್ಬರು ಆಕೆಯನ್ನು ಹಿಂದಕ್ಕೆ ಎಳೆಯಲು ಯತ್ನಿಸುತ್ತಿದ್ದರು.
ನಾನು ನನ್ನ ಪತ್ನಿ ಕರೆದು ಏನಾಗುತ್ತಿದೆ ಎಂದು ತೋರಿಸಿದೆ. ಸ್ಪಷ್ಟವಾಗಿ ಕಾಣಿಸದೆ ಇದಿದ್ದರಿಂದ ದಂಪತಿ ಜಗಳ ಅಂತ ಅಂದ್ರು. ಇದಾದ ಕೆಲವೇ ನಿಮಿಷಗಳಿಗೆ ಮೂವರು ಬಾಲಕಿಯರು ಕೆಳಗೆ ಬಿದ್ದರು. ನನ್ನ ಪ್ರಕಾರ ಒಬ್ಬಳನ್ನು ರಕ್ಷಿಸಲು ಹೋಗಿ ಮೂವರು ಬಿದ್ದಿದ್ದಾರೆ. ನಾನು ತಕ್ಷಣ ಅಂಬುಲೆನ್ಸ್ ಮತ್ತು ಪೊಲೀಸರಿಗೆ ಕರೆ ಮಾಡಿದೆ ಎಂದು ಪ್ರತ್ಯಕ್ಷ ದರ್ಶಿ ಅರುಣ್ ಕುಮಾರ್ ಮಾಹಿತಿ ನೀಡಿದರು.








