ಮಂಡ್ಯ : ಮಂಡ್ಯದಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಲು ತೂರಿದ್ದ ಕಿಂಗ್ ಪಿನ್ ನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಗಣೇಶ ಮೆರವಣಿಗೆಯನ್ನು ಸಹಿಸದೆ ಈ ಒಂದು ಗ್ಯಾಂಗ್ ಕಲ್ಲು ತೂರಾಟ ನಡೆಸುತ್ತದೆ.
ಹೌದು ಅನ್ಯ ಕೋಮುವಿನ ಐದರಿಂದ ಆರು ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ ಅನ್ಯಕೋಮಿನ ಯುವಕರ ಪೂರ್ವ ನಿಯೋಜಿತ ಕೃತ್ಯವಾಗಿದೆ. ಕಲ್ಲು ತೂರಾಟದ ಕಿಂಗ್ ಪಿನ್ ನನ್ನು ಇರ್ಫಾನ್ ಎಂದು ತಿಳಿದುಬಂದಿದೆ. ಈತ ಚನ್ನಪಟ್ಟಣ ನಿವಾಸಿಯಾಗಿದ್ದು, ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದ, ಮಸೀದಿಯ ಮುಂದೆ ಗಣೇಶ ಮೆರವಣಿಗೆ ಸಹಿಸಲಾಗದೆ ಈ ದುಷ್ಕೃತ ಎಸಗಿದ್ದಾನೆ. ಈಗಾಗಲೇ ಪೊಲೀಸರು ಹಲವು ಕಿಡಿಗೇಡಿಗಳನ್ನು ಅರೆಸ್ಟ್ ಮಾಡಿದ್ದು ಇರ್ಫಾನ್ಗಾಗಿ ಬಲೇ ಬೀಸಿದ್ದಾರೆ.