ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಯುವತಿ ಆರೋಪಿ ಸಮೀರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದು, ಸಮೀರ್ ತನ್ನ ಮನೆಗೆ ಕರೆಸಿ ಮತ್ತು ಬರೋ ಜ್ಯೂಸ್ ಕೊಟ್ಟು ರೇಪ್ ಮಾಡಿದ್ದಾನೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಯುವತಿ ಸಮೀರ್ ಸಹೋದರಿ ತೈಸಿಮ್ ಮುಲ್ಲಾ ನನ್ನ ಸ್ನೇಹಿತೆ ಆಕೆಯಿಂದ ನನಗೆ ಸಮೀರ್ ಪರಿಚಯ ಆಗಿತ್ತು. ಆತ ಚೆನ್ನಾಗಿ ಜಿಮ್ ಮಾಡಿಸ್ತಾನೆ ಅಂತ ಹೇಳಿದ್ದಳು ಬರ್ತಡೇ ಪಾರ್ಟಿ, ವೀಕೆಂಡ್ ಪಾರ್ಟಿಗೆ ಗೆ ಹೋಗಿದ್ವಿ, ನಮ್ಮ ಬರ್ತ್ಡೇ ಪಾರ್ಟಿಗೆ ಸಮೀರ್ ಸಹ ಬಂದಿದ್ದ ಇದಾದ ಮೇಲೆ ಸಮೀರ್ ನನಗೆ ಆತ್ಮೀಯನಾದ.
ಒಂದು ದಿನ ಸಮೀರ್ ತನ್ನ ಮನೆಗೆ ಕರೆದೋಯ್ದಿದ್ದ. ಮತ್ತು ಬರುವ ಜ್ಯೂಸ್ ಕೊಟ್ಟು ನನ್ನ ಮೇಲೆ ರೇಪ್ ಮಾಡಿದ್ದಾನೆ. ನನ್ನ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾನೆ. ವಿಡಿಯೋ ತೋರಿಸಿದ ಮೇಲೆ ನಂಗೆ ಗೊತ್ತಾಯಿತು. ಆಮೇಲೆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.








