ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಅತಿ ವೇಗ ಚಾಲನೆಯಿಂದ ರಸ್ತೆ ಮಧ್ಯೆಯೇ ಟಿಟಿ ವಾಹನ ಪಲ್ಟಿಯಾಗಿದೆ. ರಾಯಸಂದ್ರ ಬಳಿ ತಿರುವಿನಲ್ಲಿ ಮೂರು ಬಾರಿ ಟಿಟಿ ವಾಹನ ಪಲ್ಟಿ ಹೊಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ ಟಿಟಿ ವಾಹನಗಳ ಚಾಲಕರ ಪೈಪೋಟಿಯಿಂದ ಅಪಘಾತ ಸಂಭವಿಸಿದೆ ಅದೃಷ್ಟ ವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








