ಬೆಂಗಳೂರು : ಎರಡು ದಿನಗಳ ಹಿಂದೆ ರಾಕಿಂಗ್ ಸ್ಟಾರ್ ಯಶ್ ಅವರು ಅಭಿನಯಿಸಿದ ಟಾಕ್ಸಿಕ್ ಟೀಸರ್ ರಿಲೀಸ್ ಆಗಿದ್ದು, ಟೀಸರ್ ರಿಲೀಸ್ ಆದ 24 ಗಂಟೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದೀಗ ಟಾಕ್ಸಿಕ್ ಸಿನಿಮಾಾಗೆ ಸಂಕಷ್ಟ ಎದುರಾಗಿದ್ದು ಟಾಕ್ಸಿಕ್ ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ತೀವ್ರವಾಗಿದೆ.
ಹೌದು ಟಾಕ್ಸಿಕ್ ಟೀಸರ್ ರಿಲೀಸ್ ಆದ ಬೆನ್ನೆಲೆ ಟಾಕ್ಸಿಕ್ ಟೀಸರ್ ನಲ್ಲಿ ಅಶ್ಲೀಲತೆ ಇದೆ ಎಂದು ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ವಕೀಲ ಲೋಹಿತ್ ಹನುಮಪುರ ಎಂಬವರು ದೂರು ಕೊಟ್ಟಿದ್ದಾರೆ ಸಾರ್ವಜನಿಕ ನೈತಿಕತೆ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ.
A ಪ್ರಮಾಣ ಪತ್ರದೊಂದಿಗೆ ಬಿಡುಗಡೆ ಮಾಡುವುದು ಸೂಕ್ತ. ಟಾಕ್ಸಿಕ್ ಚಿತ್ರದ ನಿರ್ಮಾಪಕರಿಗೆ ತಕ್ಷಣ ನಿರ್ದೇಶನ ನೀಡಿ ವಯಸ್ಕ ವಿಷಯ ಇರುವ ಟೀಸರ್ ತೆಗೆಯಲು ಆದೇಶಿಸಬೇಕು. ಅಥವಾ ಸೂಕ್ತವಾಗಿ ತಿದ್ದುಪಡಿ ಮಾಡಲು ಆದೇಶಿಸಬೇಕು. ಇಲ್ಲವಾದರೆ ಸೆನ್ಸಾರ್ ಮಂಡಳಿಯ ವಿರುದ್ಧ ಪ್ರತಿಭಟನೆ ಮಾಡಲಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ.








