ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ಒಬ್ಬಳು ತನ್ನ 3 ವರ್ಷದ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚನ್ನಮ್ಮದೇವಿ ದೇವಸ್ಥಾನದ ಬಳಿ ಈ ಒಂದು ಘಟನೆ ಸಂಭವಿಸಿದೆ.
ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಪುತ್ರ ಅಬ್ದುಲ್ (3) ಜೊತೆಗೆ ತಾಯಿ ಫಾತಿಮಾ (21) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತಿ ಕಟ್ಟಿಯ ಫಾತಿಮಾ ವಾಲಿಕರ್ ಮತ್ತು ಅಬ್ದುಲ್ ರಹಮಾನ್ ಮೃತರು ಎಂದು ತಿಳಿದುಬಂದಿದ್ದು, ಪತಿ ಮಸ್ತಾನ್ ಸಾಬ್ ಕಿರುಕುಳದಿಂದ ಬೆಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. 8 ವರ್ಷದ ಹಿಂದೆ ಆತ ಮೊದಲನೇ ಮದುವೆಯಾಗಿದ್ದು, ನಂತರ ಫಾತೀಮಾಳನ್ನು ಮಸ್ತಾನ್ ಸಾಬ್ ಪ್ರೀತಿಸಿ ಮದುವೆಯಾಗಿದ್ದಾನೆ.
ಐದು ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಮದುವೆಯಾಗಿದ್ದ. ಗ್ರಾಮಸ್ಥರ ಸಮ್ಮುಖದಲ್ಲಿ ಮಸ್ತಾನ್ ಫಾತಿಮಾಳನ್ನು ಮದುವೆಯಾಗಿದ್ದಾನೆ ಇತ್ತೀಚಿಗೆ ಫಾತಿಮಾಳಿಗೆ ಹೆಚ್ಚು ಕಿರುಕುಳ ನೀಡುತ್ತಿದ್ದ, ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು ದೂರು ನೀಡಿದ್ದಾರೆ. ಕೆರೂರು ಪೊಲೀಸ್ ಠಾಣೆಗೆ ಫಾತಿಮಾ ಪೋಷಕರು ದೂರು ನೀಡಿದ್ದಾರೆ.