ಮೈಸೂರು : ಮೈಸೂರಲ್ಲಿ ಘೋರವಾದ ದುರಂತವೊಂದು ಸಂಭವಿಸಿದ್ದು, ನಾಲೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ನೀರುಪಾಲಾಗಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ನಡೆದಿದೆ.
ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿ ನಿವಾಸಿಗಳಾದ ಅಯಾನ್ (16), ಆಜಾನ್ (13) ಹಾಗೂ ಲುಕ್ಮಾನ್ (14) ಮೃತ ಬಾಲಕರು. ಅಯಾನ್ ಹಾಗೂ ಆಜಾನ್ ಕೆ ಆರ್ ಪೇಟೆ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ಕಾರಣ ಊರಿಗೆ ಬಂದಿದ್ದರು.
ಸೋಮವಾರ ಮಧ್ಯಾಹ್ನ ಸಮಯಕ್ಕೆ ಇಬ್ಬರು ಸ್ನೇಹಿತರ ಜೊತೆ ಸ್ಥಳೀಯ ಲುಕ್ಮಾನ್ ಜೊತೆ ಭಾಸ್ಕರ ದೇವಾಲಯದ ಬಳಿ ಇರುವ ಚಾಮರಾಜ ಎಡೆ ದಂಡೆ ನಾಲೆಗೆ ಈಜಲು ಹೋಗಿದ್ದರು. ನಾಲೆಯಲ್ಲಿ ಈಜುವಾಗ ನೀರಿನ ರವಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.








