ಚಿತ್ರದುರ್ಗ : ಆಕಸ್ಮಿಕವಾಗಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಯುವಕರು ದಾರುಣವಾಗಿ ಸಾವನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಿ ಆರ್ ಹಳ್ಳಿ ಬಳಿ ಈ ಒಂದು ದುರಂತ ಸಂಭವಿಸಿದೆ.
ಜಿ.ಆರ್ ಹಳ್ಳಿ ನಿವಾಸಿಯಾದ ಮಾರುತಿ (19) ಹಾಗೂ ವಿಶ್ವನಾಥ್ (23) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಕುರಿ ಮೇಕೆಗಳಿಗೆ ಹೊಂಡದಲ್ಲಿ ಇಬ್ಬರು ನೀರು ಕುಡಿಸುವಾಗ ಆಕಸ್ಮಿಕವಾಗಿ ಮಾರುತಿ ಮತ್ತು ವಿಶ್ವನಾಥ್ ಕಾಲು ಜಾರಿ ಬಿದ್ದಿದ್ದಾರೆ.ಘಟನೆ ಕುರಿತು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








