ಬೆಂಗಳೂರು : ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಚಾರವಾಗಿ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ವ್ಯಾಪಾರಿಗಳ ಜೊತೆಗೆ ಸಭೆ ನಡೆಸಿದರು. ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚಿಸಿದ ಅವರು, ಜುಲೈ 25ರಂದು ಕರೆ ನೀಡಿರುವ ಪ್ರತಿಭಟನೆ ಕೈಬಿಡಲು ವ್ಯಾಪಾರಿಗಳಿಗೆ ಮನವಿ ಮಾಡಿದರು.
ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ವಾಪಸ್ ಸರ್ಕಾರದ ಮನವಿಗೆ ಸಣ್ಣ ವ್ಯಾಪಾರಿಗಳು ಸಮ್ಮತಿ ಸೂಚಿಸಿದ್ದಾರೆ. ಬಂದ್ ವಾಪಸ್ ತೆಗೆದುಕೊಳ್ಳಲು ನಾನು ವರ್ತಕರಲ್ಲಿ ಮನವಿ ಮಾಡಿದ್ದೆ ಹಾಗಾಗಿ ವರ್ತಕರು ಬಂದ್ ವಾಪಸ್ ತೆಗೆದುಕೊಳ್ಳಲು ವರ್ತಕರು ಒಪ್ಪಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಬಗ್ಗೆ ಗೊಂದಲವಿದೆ ಎಂದಿದ್ದಾರೆ ವ್ಯಾಪಾರಿಗಳ ಜೊತೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಅವರಿಗೆ ಹೇಳಿದ್ದೇನೆ ಕೂಡಲೇ ಸಹಾಯವಾಣಿ ಆರಂಭಿಸುವಂತೆ ಮನವಿ ಮಾಡಿದ್ದಾರೆ ಈಗಿರುವ ಹೆಲ್ಪ್ಲೈನ್ ಸಮರ್ಪಕವಾಗಿ ಬಳಸಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.