ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ವಿಚಾರದ ಕುರಿತು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಫೈಟ್ ನಡೆಯುತ್ತಿದೆ.ಈ ವಿಚಾರವಾಗಿ ನಿನ್ನೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರದಿಂದ ಮೆಟ್ರೋ ಪ್ರಯಾಣದ ಏರಿಕೆ ಆಗಲ್ಲ ಎಂದು ನಿನ್ನೆ ಹೇಳಿದ್ದರು.
ಆದರೆ ಸಿಎಂ ಸಿದ್ದರಾಮಯ್ಯ ಮೆಟ್ರೋ ಪ್ರಯಾಣದ ದರ ನಾವು ಏರಿಕೆ ಮಾಡಿಲ್ಲ ಕೇಂದ್ರ ಸರ್ಕಾರದವರು ಏರಿಕೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಒಬ್ಬರ ಮೇಲೆ ಒಬ್ಬರು ಆರೋಪಗಳು ಮಾಡುತ್ತಿದ್ದು, ಇದರ ಮಧ್ಯ ಪ್ರಯಾಣಿಕರನ್ನ ಗೊಂದಲಕ್ಕೆ ಸಿಲುಕಿಸಿದ್ದಾರೆ.
ಆದರೆ ಇದೀಗ ಬಿಎಂಆರ್‌ಪಿಎಲ್ ಎಂಡಿ ರವಿಶಂಕರ್ ಮಾಹಿತಿ ನೀಡಿದ್ದು, ನಮಗೆ ಕೇಂದ್ರ ಸರ್ಕಾರದಿಂದ ಯಾವುದೇ ದರ ಏರಿಕೆ ಮಾಡಿದನ್ನು ತಡೆಹಿಡಿಯಿರಿ ಎಂದು ಯಾವುದೇ ಸೂಚನೆಗಳು ಆಗಲಿ ಬಂದಿಲ್ಲ. ಹಾಗಾಗಿ ನಾಳೆಯಿಂದ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡುವುದಾಗಿ ಏನು ಆದೇಶ ನೀಡಿದ್ದೆವೋ, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವ ಮೂಲಕ ಇದೀಗ ಸ್ಪಷ್ಟಪಡಿಸಿದ್ದಾರೆ.








