ಬೆಂಗಳೂರು : ರಾಜ್ಯದಲ್ಲಿ ಕುರ್ಚಿ ಕಿತ್ತಾಟ ಜೋರಾಗಿ ನಡೆಯುತ್ತಿದ್ದು, ನಿನ್ನೆ ಸಿಎಂ ಮತ್ತು ಡಿಸಿಎಂ ಪರಸ್ಪರ ಟ್ವೀಟ್ ವಾರ್ ನಡೆದಿದ್ದು, ನಾಯಕತ್ವ ಬದಲಾವಣೆ ಆಗುತ್ತಾ ಅಥವಾ ಇಲ್ವಾ ಅನ್ನೋದು ಎರಡು ದಿನದಲ್ಲಿ ತಿಳಿಯಲಿದೆ. ಇದೀಗ ನಾಳೆ ಸಿಎಂ ನಿವಾಸ ಕಾವೇರಿಯಲ್ಲಿ ಬೆಳಿಗ್ಗೆ 9:30ಕ್ಕೆ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಲಾಗಿದೆ.
ಹೌದು ಇಂದು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಲು ಎರಡೆರಡು ಬಾರಿ ಟಿಕೆಟ್ ಬುಕ್ ಮಾಡಿದ್ದರು. ಆದರೆ ಏಕಾಏಕಿ ದಿಡೀರ್ ಎಂದು ದೆಹಲಿ ಪ್ರವಾಸವನ್ನು ಮುಂದೂಡಿದರು. ಇದೀಗ ದೆಹಲಿ ಪ್ರವಾಸ ಮುಂದೂಡಿರುವುದಕ್ಕೆ ಕಾರಣ ತಿಳಿದು ಬಂದಿದೆ. ನಾಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಲಾಗಿದ್ದು ನಾಳೆ ಬೆಳಗ್ಗೆ 9:30ಕ್ಕೆ ಕಾವೇರಿ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ತೆರಳಲಿದ್ದಾರೆ ಹಾಗಾಗಿ ಈ ಒಂದು ಸಭೆ ಭಾರಿ ಕುತೂಹಲ ಮೂಡಿಸಿದೆ.








