ನವದೆಹಲಿ : ದ್ವಿಚಕ್ರ ವಾಹನ ಸವಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಇನ್ಮುಂದೆ ರಾಷ್ಟ್ರೀಯ ಹೆದ್ದಾರಿ ಬಳಸುವ ದ್ವಿಚಕ್ರ ವಾಹನ ಸವಾರರಿಗೆ ತೆರಿಗೆ ಪಾವತಿ ಅನ್ವಯಯವಾಗಲಿದೆ.
ಈಗ ದ್ವಿಚಕ್ರ ವಾಹನಗಳು ರಾಷ್ಟ್ರೀಯ ಹೆದ್ದಾರಿಯ ಟೋಲ್ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ. ಈ ನಿಯಮ ಜುಲೈ 15 ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ.
ಹೊಸ ನಿಯಮದ ಪ್ರಕಾರ, ದ್ವಿಚಕ್ರ ವಾಹನಗಳು ಫಾಸ್ಟ್ಟ್ಯಾಗ್ ಮೂಲಕ ಟೋಲ್ ಪಾವತಿಸಬೇಕಾಗುತ್ತದೆ. ನಿಯಮವನ್ನು ಉಲ್ಲಂಘಿಸುವ ಯಾರಾದರೂ 2,000 ರೂ. ದಂಡವನ್ನು ಪಾವತಿಸಬೇಕಾಗುತ್ತದೆ.
ದೇಶದಲ್ಲಿ ಎಷ್ಟು NHAI ಟೋಲ್ಗಳಿವೆ?
NHAI ಯ ಟೋಲ್ ಮಾಹಿತಿ ವ್ಯವಸ್ಥೆಯ ದಾಖಲೆಗಳ ಪ್ರಕಾರ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಲ್ಲಿ ಒಟ್ಟು 1057 NHAI ಟೋಲ್ಗಳಿವೆ. ಈ ಟೋಲ್ಗಳಲ್ಲಿ ಸುಮಾರು 78 ಆಂಧ್ರಪ್ರದೇಶದಲ್ಲಿ ಮಾತ್ರ ಇವೆ. ಬಿಹಾರದಲ್ಲಿ 33 ರಾಷ್ಟ್ರೀಯ ಹೆದ್ದಾರಿ ಟೋಲ್ಗಳಿದ್ದರೆ, ಉತ್ತರ ಪ್ರದೇಶದಲ್ಲಿ 123 ಟೋಲ್ ಪ್ಲಾಜಾಗಳಿವೆ.
ಆಗಸ್ಟ್ 15 ರಿಂದ 3 ಸಾವಿರ ರೂಪಾಯಿ ಪಾಸ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಟೋಲ್ಗೆ ಸಂಬಂಧಿಸಿದಂತೆ ಹೊಸ ಯೋಜನೆಯನ್ನು ಘೋಷಿಸಿದರು. ಅವರು ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಯೋಜನೆಯನ್ನು ಘೋಷಿಸಿದರು. ಈ ಪಾಸ್ 3000 ರೂ. ಮೌಲ್ಯದ್ದಾಗಿದ್ದು 200 ಟ್ರಿಪ್ಗಳನ್ನು ಮಾಡಬಹುದು. ಈ ಯೋಜನೆಯು ಇದೀಗ NHAI ಮತ್ತು NE ಟೋಲ್ ಪ್ಲಾಜಾಗಳಲ್ಲಿ ಮಾತ್ರ ಮಾನ್ಯವಾಗಿರುತ್ತದೆ. ಈ ಪಾಸ್ ರಾಜ್ಯ ಹೆದ್ದಾರಿಗಳ ಅಡಿಯಲ್ಲಿರುವ ಟೋಲ್ ಬೂತ್ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.