ಬೆಂಗಳೂರು : ಬೆಂಗಳೂರಿನಲ್ಲಿ ಹಿಟ್ & ರನ್ ಗೆ ಮತ್ತೊಬ್ಬರು ಬಲಿಯಾಗಿದ್ದು, ಟೋಲ್ ಅಪರೇಟರ್ ಮೇಲೆ ಕ್ಯಾಂಟರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ನವಯುಗ ಟೋಲ್ ನಲ್ಲಿ ಹಿಟ್ &ರನ್ ಗೆ ಟೋಲ್ ಅಪರೇರಟರ್ ನಾಗರಾಜ್ ಸಾವನ್ನಪ್ಪಿದ್ದಾರೆ. ಟೋಲ್ ಕಟ್ಟದೇ ಹೊರಟಿದ್ದ ಕ್ಯಾಂಟರ್ ತಡೆಯಲು ಹೋದಾಗ ಚಾಲಕ ಕ್ಯಾಂಟರ್ ನಿಲ್ಲಿಸದೇ ಆಪರೇಟರ್ ನಾಗರಾಜ್ ಮೇಲೆ ಹರಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.