ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಇಂದು ಮೈಸೂರಲ್ಲಿ ಇಬ್ಬರು, ದಾವಣಗೆರೆ, ಗದಗ ಹಾಗು ರಾಯಚೂರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ ಒಟ್ಟು ಐದು ಜನ ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ.
ಬಸ್ ನಲ್ಲಿ ತೆರಳುವಾಗಲೇ ಸರ್ಕಾರಿ ನೌಕರ ಬಲಿ!
ಮೈಸೂರಿನಲ್ಲಿ ಸರ್ಕಾರಿ ನೌಕರರೊಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸರ್ಕಾರಿ ನೌಕರ ಅರುಣ್ ಎನ್ನುವವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗಮಧ್ಯೆ ಅರುಣ್ (44) ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಕಚೇರಿಯಲ್ಲಿ ಅರುಣ್ SDA ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಕಿಲಾರಿ ಗ್ರಾಮದ ನಿವಾಸಿಯಾಗಿದ್ದಾರೆ.
ಹಾರ್ಟ್ ಅಟ್ಯಾಕ್ ನಿಂದ ದೇವಸ್ಥಾನದ ಅರ್ಚಕ ಸಾವು!
ಮೈಸೂರಲ್ಲಿ ಇಂದು ಬೆಳಿಗ್ಗೆ ತಾನೇ ಬಸ್ ನಲ್ಲಿ ಸಂಚರಿಸುವಾಗ ಸರ್ಕಾರಿ ನೌಕರರೊಬ್ಬರೂ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೊಂದು ಘಟನೆ ವರದಿಯಾಗಿದ್ದು, ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರೂ ಹೃದಯಾಘಾತದಿಂದ ಸಾವನ್ನಪಿದ್ದಾರೆ.
ಹೌದು ಮೈಸೂರಲ್ಲಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಜಿಲ್ಲೆಯ ಟಿ. ನರಸೀಪುರ ದೇಗುಲದ ಪ್ರಧಾನ ಅರ್ಚಕ ಸಂಪತ್ ಕುಮಾರ್ ಇದೀಗ ಸಾವನಪ್ಪಿದ್ದಾರೆ. ಸಂಪತ್ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾಗಿದ್ದು, ಇವರು ಮೂಲತಃ ರಾಮನಗರ ಜಿಲ್ಲೆಯ ನಿವಾಸಿಯಾಗಿದ್ದು, ತಡರಾತ್ರಿ ಅವರಿಗೆ ತೀವ್ರ ಎದೆ ನೋವಿನಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ವಾಕಿಂಗ್ ಮಾಡುವಾಗಲೇ ಕುಸಿದುಬಿದ್ದು ಉದ್ಯಮಿ ಸಾವು!
ಇನ್ನು ದಾವಣಗೆರೆಯಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಉದ್ಯಮಿಯೊಬ್ಬರು ವಾಕಿಂಗ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ವಾಕಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಉದ್ಯಮಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ಶಕ್ತಿನಗರದ ನಿವಾಸಿ ಅನಿಲ್ ಕುಮಾರ್ (40) ಸಾವನ್ನಪ್ಪಿದ್ದಾರೆ. ಅನೀಲ್ ಕುಮಾರ್ ವಾಕಿಂಗ್ ಮಾಡುತ್ತಿರುವಾಗ ಕುಸಿದು ಬೀಳುತ್ತಿರುವ ದೃಶ್ಯ ಸಮೀಪದ ಅಂಗಡಿಯೊಂದರ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ.
ಡಾನ್ಸ್ ಮಾಡುವಾಗಲೇ ‘ಹೃದಯಾಘಾತ’ ದಿಂದ ವ್ಯಕ್ತಿ ಸಾವು!
ಅಲ್ಲದೇ ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ ದಿಂದ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿ ಸಾವನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎಂದು ತಿಳಿದುಬಂದಿದೆ. ಬಸವರಾಜ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆಗೆ ರೆಸಾರ್ಟ್ ಗೆ ತೆರಳಿದ್ದಾಗಲೇ ಈ ಒಂದು ಘಟನೆ ಸಂಭವಿಸಿದೆ. ಇಂದು ಬೆಂಗಳೂರಿನಿಂದ ಸರ್ಜಾಪುರ ಗ್ರಾಮಕ್ಕೆ ಬಸವರಾಜ್ ಶವವನ್ನು ಇದೀಗ ಶಿಫ್ಟ್ ಮಾಡಲಾಗಿದೆ.
ಎದೆ ನೋವಿಂದ ಮಹಿಳೆ ಸಾವು!
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿ ಶೋಭಾ ವಡಕಣ್ಣವರ್ (42) ಸಾವನಪ್ಪಿದ್ದಾರೆ. ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದರು ಕೂಡ ಚಿಕಿತ್ಸೆ ಫಲಕಾರಿ ಆಗದೆ ಶೋಭಾ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಶೋಭಾ ವಡಕಣ್ಣವರ ಹೃದಯಘಾತದಿಂದ ಸಾವನಪ್ಪಿದ್ದಾರೆ.