ಬೆಂಗಳೂರು : ಇಂಡಿಗೋ ವಿಮಾನ ಹಾರಾಟ ಸಮಸ್ಯೆ ಮುಂದುವರೆದಿದ್ದು, ಇಂದು ಸಹ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 60 ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ.
ಕೆಂಪೇಗೌಡ ಏರ್ಪೋರ್ಟ್ ನಿಂದ ತರಳಬೇಕಿದ್ದ 28 ವಿಮಾನಗಳು ಮತ್ತು ಕೆಂಪೇಗೌಡ ಏರ್ಪೋರ್ಟ್ ಗೆ ಆಗಮಿಸಿದ್ದ 32 ವಿಮಾನಗಳ ಹಾರಾಟ ರದ್ದು ಆಗಿದೆ. ವಿಮಾನಗಳ ಬಗ್ಗೆ ಪ್ರಯಾಣಿಕರಿಗೆ ಮೊದಲೇ ಸಂದೇಶ ರವಾನಿಸಲಾಗಿತ್ತು. ನಿನ್ನೆ 58 ವಿಮಾನಗಳನ್ನು ಕ್ಯಾನ್ಸಲ್ ಮಾಡಲಾಗಿತ್ತು. ಇಂದು ಮತ್ತೆ 60 ವಿಮಾನಗಳ ಹಾರಾಟ ರದ್ದು ಆಗಿದೆ. ವಿಮಾನಗಳು ರದ್ದು ಆಗಿದ್ದು ಏರ್ಪೋರ್ಟ್ಗೆ ಪ್ರಯಾಣಿಕರು ಬರಬೇಡಿ ಎಂದು ವಿಮಾನ ಪ್ರಯಾಣಿಕರಿಗೆ ಇಂಡಿಗೋ ಏರ್ಲೈನ್ಸ್ ಸಂದೇಶ ರವಾನಿಸಿದೆ.








