ಹುಬ್ಬಳ್ಳಿ : ಹುಬ್ಬಳ್ಳಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸ್ಫೋಟಕವಾದ ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ಎಷ್ಟೇ ಪ್ಯಾಚ್ ಅಪ್ ಮಾಡಿದರು ಅದು ಆಗಲ್ಲ. ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರಿಗೆ ಕಂಟಕವಾಗಿದೆ.14 ನಿವೇಶನ ಅಷ್ಟೇ ಅಲ್ಲ ಮುಡಾದಲ್ಲಿ 50ಲ್ ಸಾವಿರ ಕೋಟಿಗೂ ದೊಡ್ಡ ಹಗರಣ ನಡೆದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಡಾದಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಹಗರಣ ನಡೆದಿದೆ. ಇಂದು ದೆಹಲಿಗೆ ತೆರಳಿದ್ದು ಅಲ್ಲಿ, ಯಾವುದೇ ಪ್ಯಾಚಪ್ ಆಗುವ ಸಾಧ್ಯತೆ ಇಲ್ಲ ಸಿದ್ದರಾಮಯ್ಯ ರಾಜೀನಾಮೆ ಇಡುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನಿವೇಶನಗಳನ್ನು ಕೊಟ್ಟಿದ್ದಾರೆ. ಸ್ನೇಹಮಯಿ ಕೃಷ್ಣ ಹೋರಾಟ ಮಾಡುತ್ತಿದ್ದಾರೆ. ಪೂರಕವಾದ ತೀರ್ಪು ಬರುತ್ತದೆ ಮುಡಾ ಹಗರಣದ ಬಗ್ಗೆ ಸಿಬಿಐ ತನಿಖೆ ಆಗಬೇಕು. ಬೆದರಿಕೆ ನಡುವೆಯೂ ಸ್ನೇಹಮಯಿ ಕೃಷ್ಣ ಹೋರಾಟ ಮಾಡುತ್ತಿದ್ದಾರೆ. ದೆಹಲಿಗೆ ಹೋಗಿ ಎಷ್ಟೇ ಪ್ಯಾಚ್ ಅಪ್ ಮಾಡಿದರು ಅದು ಆಗಲ್ಲ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಏನೇ ಪ್ರಯತ್ನ ಮಾಡಿದರು ರಾಜೀನಾಮೆ ಕೊಡಲೇಬೇಕು ಎಂದು ಹುಬ್ಬಳ್ಳಿಯ ವರೂರ್ ನಲ್ಲಿ ಬಿವೈ ವಿಜಯೇಂದ್ರ ತಿಳಿಸಿದರು.