ದಾವಣಗೆರೆ : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮುಸ್ಲಿಂಮರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪೋಟಗೆ ಹೇಳಿದ್ದು 2028ಕ್ಕೆ ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲು ಹೈಕಮಾಂಡ್ ಒಪ್ಪಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಲ್ಪಸಂಖ್ಯಾತರಿಗೆ ಟಿಕೆಟ್ ತಪ್ಪಿದರ ಬಗ್ಗೆ 2028 ರಲ್ಲಿ ಅಲ್ಪಸಂಖ್ಯಾತರನ್ನು ಪರಿಗಣಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಮನವಿ ಮಾಡಿದ್ದು ಹೈಕಮಾಂಡ್ ಸಹ ಅಲ್ಪಸಂಖ್ಯಾತರನ್ನು ಪರಿಗಣಿಸುತ್ತೇವೆ ಅಂತ ಹೇಳಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ ಮುಂದೆಯೇ ಹೈಕಮಾಂಡ್ ಈ ಒಂದು ಹೇಳಿಕೆ ನೀಡಿದ್ದಾರೆ. ಕೊನೆಗೆ ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಅಂತ ಜಮೀರ್ ಅಹ್ಮದ್ ಹೇಳಿದ್ದು ಯಶಸ್ ಮಲ್ಲಿಕಾರ್ಜುನ್ ನಾನು ಆತ್ಮೀಯ ಸ್ನೇಹಿತರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಲಕ್ಷಾಂತರ ಜನ ಕಾರ್ಯಕರ್ತರಿದ್ದಾರೆ. ಅವರವರ ಅಭಿಮಾನಿಗಳು ಘೋಷಣೆ ಕೂಗುವುದು ಸಹಜ ಆದರೆ ಕಾಂಗ್ರೆಸ್ ಪಕ್ಷಕ್ಕೆ ಯಾರೋ ಒಬ್ಬರ ಮೇಲೆ ಯಾವತ್ತೂ ಡಿಪೆಂಡ್ ಇಲ್ಲ ನಿಷ್ಠಾವಂತ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ಯಾವುದೋ ಒಂದು ಸಿಟ್ಟಿನಲ್ಲಿ ಎಸ್ ಎಸ್ ಮಲ್ಲಿಕಾರ್ಜುನ್ ಏನೋ ಒಂದು ಮಾತು ಹೇಳಿದ್ದಾರೆ ನನಗೆ ಯಾವುದೇ ಬೇಜಾರಿಲ್ಲ ಅವರು ನನ್ನ ಸ್ನೇಹಿತ ಅವರು ಹೇಳಿದ ತಕ್ಷಣ ಮುನಿಸಿಕೊಳ್ಳುವುದು ಸರಿಯಲ್ಲ.
ಮಲ್ಲಿಕಾರ್ಜುನ್ ಅವರೇ ನನಗೆ ಫೋನ್ ಮಾಡಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಅಂತ ಹೇಳಿದ್ದಾರೆ. ನಿನ್ನೆ ಈ ಕುರಿತು ನನಗೆ ಕರೆ ಮಾಡಿದ್ದರು. ನಾನು ನಾಳೆ ಬರುತ್ತೇನೆ ಎಂದು ಅವರಿಗೆ ಹೇಳಿದ್ದೇನೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಶಾಸಕಬರ್ದಭಟ್ಟರು ಅವರ ಕುಟುಂಬಕ್ಕೆ ಟಿಕೆಟ್ ನೀಡುವುದು ನೀತಿ ಹಾಗಾಗಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.








