ಶಿವಮೊಗ್ಗ : ಶಿವಮೊಗ್ಗದ ತುಂಗಾ ನದಿಯ ಹಿನ್ನೀರಿನಲ್ಲಿ ಮೂವರ ಮೃತ ದೇಹ ಪತ್ತೆಯಾಗಿವೆ. ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆಯ ಮೃತ ದೇಹಗಳು ಪತ್ತೆಯಾಗಿವೆ. ಕೊಳೆತ ಸ್ಥಿತಿಯಲ್ಲಿ ಮೂವರು ಅಪರಿಚಿತ ಮೃತ ದೇಹಗಳು ಪತ್ತೆಯಾಗಿವೆ.
ಸಕ್ರೆಬೈಲ್ ಆನೆ ಬಿಡಾರದ 10n3 ಮೈಲಿಕಲ್ಲಿನ ಬಳಿ ಮೂವರು ಅಪರಿಚಿತ ಮೃತ ದೇಹಗಳು ಪತ್ತೆಯಾಗಿವೆ. ಶಿವಮೊಗ್ಗ ತಾಲೂಕಿನ 10ನೇ ಮೈಲಿಕಲ್ಲಿನ ಬ್ಯಾಕ್ ವಾಟರ್ ಬಳಿ ಮೃತ ದೇಹಗಳು ಪತ್ತೆಯಾಗಿದ್ದು ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆಯ ಪೊಲೀಸರುಪೇಟೆ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದೆ.