ಬೆಂಗಳೂರು : ರಾಜ್ಯದಲ್ಲಿ ಇಂದು NIA ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದ ಅಡಿ ಮೂರನ್ನು ಬಂಧಿಸಿದೆ. ಆದರೆ ದಕ್ಷಿಣ ಭಾರತದ ಬಹುತೇಕ ಸ್ಫೋಟಗಳಲ್ಲಿ ಮಾಸ್ಟರ್ ಮೈಂಡ್ ಆಗಿದ್ದ ಉಗ್ರ ನಾಸಿರ್ ಬೆಂಗಳೂರಲ್ಲಿ ಕೂಡ ದೊಡ್ಡ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿಕೊಂಡಿದ್ದ ಎಂದು ಸ್ಪೋಟಕ ಅಂಶ ಬಯಲಾಗಿದೆ.
ಹೌದು ಶಂಕಿತ ಉಗ್ರರ ವಿಚಾರಣೆಯಲ್ಲಿ ಸ್ಪೋಟಕ ಅಂಶ ಬಯಲಾಗಿದ್ದು ಜೈಲಿನಲ್ಲಿ ಇದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡಲಾಗುತ್ತಿತ್ತು. ಭಯೋತ್ಪಾದನೆ ಬಗ್ಗೆ ಉಗ್ರ ನಾಸಿರ್ ಮೈಂಡ್ ವಾಷ್ ಮಾಡುತ್ತಿದ್ದ. ಮೈಂಡ್ ವಾಷ್ ಮಾಡುವುದರಲ್ಲಿ ನಾಸಿರ್ ಎತ್ತಿದ ಕೈ ಹಲವರನ್ನು ಉಗ್ರ ಚಟುವಟಿಕೆಗಾಗಿ ಬಳಸಿಕೊಂಡಿದ್ದಾನೆ. ಜೈಲಿನಲ್ಲಿದ್ದ ಯುವಕರ ತಂಡವನ್ನು ಕೂಡ ನಾಸಿರ್ ತಯಾರು ಮಾಡಿದ್ದ.
ಅಲ್ಲದೇ ನಾಸಿರ್ ನನ್ನು ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಉಗ್ರ ನಾಸಿರ್ ದಕ್ಷಿಣ ಭಾರತದಲ್ಲಿನ ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ಎನ್ನಲಾಗಿದೆ. 2008ರ ಸರಣಿ ಬಾಂಬ್ ಆಗಿರಬಹುದು, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿರಬಹುದು, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಬ್ಲಾಸ್ಟ್ ಸೇರಿದಂತೆ ಹಲವು ಬ್ಲಾಸ್ಟ್ ಗಳ ಮಾಸ್ಟರ್ ಮೈಂಡ್ ನಾಸಿರ್ ಎಂದು ತಿಳಿದುಬಂದಿದೆ. ಎನ್ಐಎ ಅಧಿಕಾರಿಗಳು ಬಂಧಿತ ಉಗ್ರರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ.