ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ವಿದ್ಯುತ್ ಅವಘಡದಿಂದ ಮನೆಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಕಟ್ಟದಲ್ಲಿದ್ದ ತಾಯಿ ಮಗಳನಿ ರಕ್ಷಣೆ ಮಾಡಲಾಗಿದೆ. ಈ ಒಂದು ಘಟನೆ ಘಟನೆ ದಾವಣಗೆರೆಯ ಅರುಣಾ ಸರ್ಕಲ್, ಬಳಿಯ ರೈಲ್ವೆ ಗೇಟ್ ನ ಸಮೀಪದ ಮನೆಯಲ್ಲಿ ಈ ಒಂದು ಅಗ್ನಿ ಅವಗಡ ಸಂಭವಿಸಿದೆ.
ಕಟ್ಟಡದ ಎರಡನೇ ಫ್ಲೋರ್ ನಲ್ಲಿ ಸಿಲುಕಿದ್ದ ಗೀತಾ ಗಂಗಾಧರ್ ಮತ್ತು ಪುತ್ರಿ ಮಧು ರಕ್ಷಣೆ ಮಾಡಲಾಗಿದೆ. ವಿದ್ಯುತ್ ಅವಘಡದಿಂದ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ತಾಯಿ ಮಗಳನ್ನು ರಕ್ಷಣೆ ಮಾಡಲಾಗಿದೆ. ಏಣಿಯ ಸಹಾಯದಿಂದ ತಾಯಿ ಮತ್ತು ಮಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ. ವಿದ್ಯುತ್ ಅವಘಡದಿಂದ ಮೂರು ಮಹಡಿಯ ಮನೆ ಸಂಪೂರ್ಣವಾಗಿ ಭಸ್ಮವಾಗಿದೆ. ಮನೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ. ಘಟನೆ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.