ಮೈಸೂರು : ಯುಗಾದಿ ಹಬ್ಬದಂದೆ ಘೋರವಾದ ದುರಂತ ಒಂದು ಸಂಭವಿಸಿದ್ದು ಕೆರೆಯಲ್ಲಿ ಹಸುಗಳನ್ನು ತೊಳೆಯಲು ಹೋದ ಮೂವರು ನೀರು ಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ಘಟನೆ ಸಂಭವಿಸಿದೆ
ಮುದ್ದೇಗೌಡ (48) ಬಸವಗೌಡ (45) ಮತ್ತು ವಿನೋದ್ (17) ಮೃತರು ಎಂದು ತಿಳಿದುಬಂದಿದೆ. ಹಬ್ಬ ಹಿನ್ನೆಲೆಯಲ್ಲಿ ಹಸುಗಳನ್ನು ತೊಳೆಯಲು ವಿನೋದ್ ಎನ್ನುವವರು ಕೆರೆಗೆ ಹೋಗಿದ್ದರು. ಈ ವೇಳೆ ಹಸು ವಿನೋದ್ನನ್ನು ಕೆರೆಯ ಮಧ್ಯದಲ್ಲಿ ಎಳೆದೊಯ್ದಿದೆ.
ಇದನ್ನು ನೋಡಿದ ಮುದ್ದೇಗೌಡ ಮತ್ತು ಬಸವೇಗೌಡ ತಕ್ಷಣ ವಿನೋದ ರಕ್ಷಣೆಗೆ ಕೆರೆಗೆ ಇಳಿದಿದ್ದಾರೆ. ಈಜು ಬಾರದೆ ನೀರಿನಲ್ಲಿ ಮುಳುಗಿ ಮೂವರು ದುರಂತವಾಗಿ ಸಾವನಪ್ಪಿದ್ದಾರೆ. ಘಟನೆ ಕುರಿತಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.