ಉತ್ತರಪ್ರದೇಶ : ನಿನ್ನೆ ರಾತ್ರಿ ಅಯೋಧ್ಯೆಯ ಬಳಿ ಲಾರಿ ಮತ್ತು ಟಿಟಿ ನಡುವೆ ಮುಖಾಮುಖಿ ಡಿಕ್ಕಿ ಆಗಿದೆ.ಅಪಘಾತದಲ್ಲಿ ಕಲಬುರ್ಗಿ ಮೂಲದ ಒಂದೇ ಕುಟುಂಬದ ಮೂವರು ಸಾವನಪ್ಪಿದ್ದು, ಇನ್ನುಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ನಡೆದಿದೆ.
ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಗಾಯಾಳುಗಳಿಗೆ ಅಯೋಧ್ಯೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಟಿಟಿಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.
ಟಿಟಿ ವಾಹನದಲ್ಲಿದ್ದವರು ಕಾಶಿ ವಿಶ್ವನಾಥನ ದರ್ಶನವನ್ನು ಪಡೆದು ವಾಪಸಾಗುತ್ತಿದ್ದ ವೇಳೆ ಲಾರಿಗೆ ಟಿಟಿ ವಾಹನ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಲಬುರ್ಗಿ ಜಿಲ್ಲೆಯ ಮೂವರು ಸಾವನಪ್ಪಿದ್ದಾರೆ.ಅಲ್ಲದೆ ಟಿಟಿ ವಾಹನದಲ್ಲಿದ್ದ ಇನ್ನೂ ಉಳಿದ ಹಲವರಿಗೆ ಗಂಭೀರವಾದಂತಹ ಗಾಯಗಳಾಗಿದ್ದು ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.