ಬೆಂಗಳೂರು : ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರದ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಕರೀಬೀರನಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
SHOCKING : ಬೆಂಗಳೂರಲ್ಲಿ 3 ವರ್ಷದ ಮಗುವಿಗೆ ಚಿತ್ರಹಿಂಸೆ : ಗೆಳೆಯನ ಜೊತೆ ಸೇರಿ ತಾಯಿಯಿಂದ ಹೀನ ಕೃತ್ಯ
ಕರಿಬೀರನ ಹೊಸಹಳ್ಳಿಯ ಮರಿಯಪ್ಪ(65), ಮುನಿಯಮ್ಮ(60), ಭಾರತಿ(40) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ.ಮಧ್ಯಾಹ್ನ ತೋಟದ ಬಳಿ ಊಟ ಮಾಡಿ ಕೈ ತೊಳೆಯಲು ಹೋದ ಮಗಳು ಭಾರತಿ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾಳೆ. ಬಳಿಕ ಆಕೆಯನ್ನ ರಕ್ಷಣೆ ಮಾಡಲು ಹೋದ ಮರಿಯಪ್ಪ ಹಾಗೂ ಮುನಿಯಮ್ಮ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗಂಡಸರಿಗೂ ಉಪಯುಕ್ತವಾಗುವ ಹೇರ್ ಪ್ಯಾಕ್ಗಳಿವು; ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ!
ಘಟನಾ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದು, ಮೃತ ದೇಹಗಳನ್ನ ಹೊರತೆಗೆದು ನಂತರ ಹೊಸಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಹೊಸಕೋಟೆ ವ್ಯಾಪ್ತಿಯ ಠಾಣೆಯಲ್ಲಿ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.