ಹಾವೇರಿ : ಸಾಲಭಾದೇ ತಾಳದೆ ಗದಗ ಮೂಲದ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಯಲವಿಗೆ ರೈಲು ನಿಲ್ದಾಣದ ಬಳಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬಿಜೆಪಿ ಕೊಟ್ಟ ಖಾಸಗಿ ‘FSL’ ವರದಿ ಗಣನೆಗೆ ತೆಗೆದುಕೊಳ್ಳಲ್ಲ : ಗೃಹ ಸಚಿವ ಜಿ.ಪರಮೇಶ್ವರ್
ಆತ್ಮಹತ್ಯೆ ಶರಣಾದವರು ಗೋನಾಳ ಗ್ರಾಮದ ತೆಲಿ ಕುಟುಂಬದವರು ಎಂದು ಹೇಳಲಾಗುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋನಾಳ ಗ್ರಾಮದವರು ಎಂದು ತಿಳಿದುಬಂದಿದೆ. ಮೊದಲು ರೈಲಿಗೆ ಸಿಲುಕಿ ಮಂಜುನಾಥ್ ತೇಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತ್ರನನ್ನು ರಕ್ಷಿಸಲು ಹೋಗಿ ರೇಣವ್ವ ಕೂಡ ಸಾವನ್ನಪ್ಪಿದ್ದಾಳೆ.
ಮೋದಿ ಸರ್ಕಾರ ರೈತರನ್ನು ‘ಶತ್ರುಗಳಂತೆ’ ನಡೆಸಿಕೊಳ್ಳುತ್ತಿದೆ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ತಾಯಿ ಹಾಗೂ ಪುತ್ರನ ಸಾವಿನ ಸುದ್ದಿ ತಿಳಿದು ಸಾವಕ್ಕ ನೇಣಿಗೆ ಶರಣಾಗಿದ್ದಾಳೆ. ಗೋನಾಳ ಗ್ರಾಮದ ಮನೆಯಲ್ಲಿ ಸಾವಕ್ಕ ನೇಣಿಗೆ ಶರಣಾಗಿದ್ದಾಳೆ.ಟ್ರ್ಯಾಕ್ಟರ್ ಸಾಲ ಪಾವತಿ ವಿಚಾರವಾಗಿ ಮಂಜುನಾಥ್ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಅದಾದ ನಂತರ ರೈಲುಗೆ ಸಿಲುಕಿ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು : ‘ನಕಲಿ ವೈದ್ಯನ’ ಚುಚ್ಚುಮದ್ದಿಗೆ ಹಾರಿಹೋಯ್ತು ವೃದ್ದನ ಪ್ರಾಣ!