ಹಾವೇರಿ : ನಿನ್ನೆ ಸಂಕ್ರಾಂತಿ ಹಬ್ಬದ ದಿನದಂದು ಘೋರವಾದ ದುರಂತ ಸಂಭವಿಸಿದ್ದು, ಪ್ರತ್ಯೇಕ ಘಟನೆಯಲ್ಲಿ ಪುಣ್ಯ ಸ್ನಾನಕ್ಕೆ ಎಂದು ನದಿಗೆ ಇಳಿದಿದ್ದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೌದು ಹಾವೇರಿ, ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ನದಿಯಲ್ಲಿ ಪುಣ್ಯ ಸ್ನಾನ ಮಾಡಲು ಇಳಿದ ಮೂವರು ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಕಣ ಗ್ರಾಮದ ಬಳಿ ವರದಾ ನದಿಯಲ್ಲಿ ಇಳಿದ ರಮೇಶ ಕಡ್ಡೇರ(32) ನೀರು ಪಾಲಾಗಿದ್ದಾರೆ.
ಅದೇ ರೀತಿಯಾಗಿ ಕೊಪ್ಪಳ ತಾಲೂಕಿನ ಕಾತರಕಿ ಜಾಕ್ವೆಲ್ ಸಮೀಪ ಸ್ನಾನ ಮಾಡಲು ಹೋಗಿದ್ದ ಶೇಖರಗೌಡ ನಾಗನಗೌಡ್ರ(30) ಎಂಬುವರು ನೀರು ಪಾಲಾಗಿದ್ದಾರೆ.ಇನ್ನು ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿಯ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ತಿಪ್ಪೇಶ್(21) ನೀರುಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.