ಶಿವಮೊಗ್ಗ : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಗಿಂತಲೂ ಮುಂಚೆ ಮಳೆ ಆರಂಭವಾಗಿದೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗುತ್ತಿದ್ದು ಅದರಲ್ಲೂ, ಶಿವಮೊಗ್ಗ ಒಂದೇ ಜಿಲ್ಲೆಯಲ್ಲಿ ದಾಖಲೆಯ 270 ಮಿಲಿ ಮೀಟರ್ ಮಳೆ ಆಗಿದೆ ಎಂದು ತಿಳಿದು ಬಂದಿದೆ.
ಹೌದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ.ಹೊಸನಗರ ತಾಲೂಕಿನ ಹುಲಿಕಲ್ ನಲ್ಲಿ 270 ಮಿಲಿ ಮೀಟರ್ ಮಳೆ ಆಗಿದೆ. ರಾಜ್ಯದಲ್ಲೇ ಅತ್ಯಧಿಕ 270 ಮಿಲಿ ಮೀಟರ್ ಪ್ರಮಾಣದ ಮಳೆ ದಾಖಲೆಯಾಗಿದೆ. ಕಳೆದ 24 ಗಂಟೆಯಲ್ಲಿ ಹುಲಿಕಲ್ ನಲ್ಲಿ 270 ಮಿಲಿ ಮೀಟರ್ ಮಳೆ ಆಗಿರೋದು ದಾಖಲೆಯಾಗಿದೆ.
ಅದೇ ರೀತಿ ಹೊಸನಗರ ತಾಲೂಕಿನ ಯಡಿಯೂರಿನಲ್ಲಿ 234, ಮಾಸ್ತಿಕಟ್ಟೆಯಲ್ಲಿ 217, ಮಾಣಿಯಲ್ಲಿ 257, ಹಕ್ಕಲಿನಲ್ಲಿ 159, ಬಿದನೂರು ನಗರದಲ್ಲಿ 134, ಚಕ್ರ ನಗರದಲ್ಲಿ 120, ಲಿಂಗನಮಕ್ಕಿಯಲ್ಲಿ 83, ಹೊಸನಗರದಲ್ಲಿ 75.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ 45,070 ಕ್ಯೂಸೆಕ್ ನೀರಿನ ಒಳಹರಿವು ಹೆಚ್ಚಿದ್ದು, ಜಲಾಶಯದಲ್ಲಿ ಕಳೆದ ಬಾರಿಗಿಂತ 33 ಅಡಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1890 ಅಡಿ ಇದ್ದು ಜಲಾಶಯದ ನೀರಿನ ಮಟ್ಟ 1,787.80 ಅಡಿ ತಲುಪಿದೆ. ಕಳೆದ ವರ್ಷ ಇದೆ ಅವಧಿಗೆ 1,754.95 ಅಡಿ ನೀರು ಸಂಗ್ರಹವಾಗಿತ್ತು.