ಬೆಂಗಳೂರು : ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಗೆ ಅಶೀಲ ಮೆಸೇಜ್ ಮಾಡಿದ್ದರು. ಈ ವಿಚಾರವಾಗಿ ದಾಖಲೆ ಸಮೇತ ನಟಿ ರಮ್ಯಾ ಬೆಂಗಳೂರು ಕಮಿಷನರಿಗೆ ದೂರು ನೀಡಿದ್ದರು. ಬಳಿಕ ಕಮಿಷನರ್ ಈ ಒಂದು ಪ್ರಕರಣವನ್ನು ಸಿಸಿಬಿಗೆ ವರ್ಗಯಿಸಿದ್ದರು. ಬಳಿಕ 43 ಇನ್ಸ್ಟಾ ಖಾತೆಗಳ ವಿರುದ್ಧ ಕೂಡ ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಅಧಿಕಾರಿಗಳು 43 ಇನ್ಸ್ಟಾ ಅಕೌಂಟ್ಗಳ ತನಿಖೆಗೆ ಇಳಿದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಕೊನೆಗೂ ನಟಿ ರಮ್ಯಾ ಎದುರು ಮಂಡಿಯೂರಿದ್ದು, ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೇಸ್ ಹಿಂಪಡೆಯುವಂತೆ ಮೆಸೇಜ್ ಮಾಡಿ ಮನವಿ ಮಾಡಿದ್ದಾರೆ.
ಹೌದು ನಟಿ ರಮ್ಯಾ ಗೆ ಮೆಸೇಜ್ ಮಾಡಿ ಕೇಸ್ ಪಡೆಯುವಂತೆ ಮನವಿ ಮೆಸೇಜ್ ಮಾಡಿ ಕೆಲ ಅಭಿಮಾನಿಗಳು ನಟಿ ರಮ್ಯಾ ಅವರಿಗೆ ಮೆಸೇಜ್ ಮಾಡಿ ಒತ್ತಡ ಹಾಕುತ್ತಿದ್ದಾರೆ. ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೆಲವರು ನಟಿ ರಮ್ಯಾಗೆ ಮೆಸೇಜ್ ಮಾಡಿ ಒತ್ತಡ ಹಾಕುತ್ತಿದ್ದಾರೆ. ರಮ್ಯಾ ದೂರು ಆಧರಿಸಿ ಈಗಾಗಲೇ ಸೈಬರ್ ಕ್ರೈಂ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಕೆಲ ಕಿಡಿಗೇಡಿಗಳು ದರ್ಶನ್ ಫ್ಯಾನ್ಸ್ ಎಂದು ಅಶ್ಲೀಲ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ನಟಿ ರಮ್ಯಾ ಕಮಿಷನರ್ ಗೆ ದಾಖಲೆಯ ಸಮೇತ ದೂರು ನೀಡಿದ್ದರು. ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡಿ ನಿಂದನೆ ಮಾಡಿದ್ದಾರೆ. ಇದೀಗ ಅಭಿಮಾನಿಗಳು ಮೆಸೇಜ್ ಮಾಡಿ ಕೇಸ್ ಹಿಂಪಡೆಯುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.