ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ನಾಚಿಕೆ ಪಡುವಂತಹ ತಲೆತಗ್ಗಿಸುವಂತಹ ಘಟನೆ ನಡೆದಿದ್ದು ಡಿಜಿಪಿ ರಾಮಚಂದ್ರರಾವ್ ಅವರ ರಾಸಲೀಲೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಗುತ್ತಿದೆ ಇದೇ ವಿಚಾರವಾಗಿ ರಾಮಚಂದ್ರರಾವ್ ಎಂದು ಬೆಂಗಳೂರಿನ ಸದಾಶಿವನಾಗರದಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದರು.
ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿಯಾಗಲು ಬಂದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಚಂದ್ರರಾವ್, ಇದು ಹಳೆಯ ಹಳೆಯ ವಿಡಿಯೋ ಎಂಟು ವರ್ಷ ಹಳೆಯದು. ಆಗ ನಾನು ಬೆಳಗಾವಿಯಲ್ಲಿ ಇದ್ದೆ. ಈ ವಿಡಿಯೋ ಸುಳ್ಳು ಇದರ ಕುರಿತು ವಕೀಲರ ಜೊತೆಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ. ಇದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಯಾವಾಗ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ತನಿಖೆ ಬಳಿಕ ಎಲ್ಲವೂ ಗೊತ್ತಾಗುತ್ತದೆ. ಈ ರೀತಿ ಸುಳ್ಳು ಮಾಹಿತಿ ಹರಿಬಿಡಬಾರದು ಎಂದು ತಿಳಿಸಿದರು.







