ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹಿಂದೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರಿಗೆ ಕಿಡಿಗೇಡಿಗಳು ಅಶ್ಲೀಲವಾಗಿ ಕಮೆಂಟ್ ಹಾಕಿದ್ದರು. ಅದಾದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಈ ಕಾಟ ಇತ್ತು. ಇದೀಗ ಕಾಂಗ್ರೆಸ್ ಶಾಸಕಿ ನಯನ ಮೊಟಮ್ಮ ಅವರಿಗೆ ಕಿಡಿಗೇಡಿಗಳು ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ.
ಹೌದು ಕಾಂಗ್ರೆಸ್ ಶಾಸಕಿ ನಯನ ಮೊಟ್ಟಮ್ಮಗು ಇದೀಗ ಅಶ್ಲೀಲ ಕಮೆಂಟ್ ಕಾಟ ಶುರುವಾಗಿದೆ. ಮೂಡಿಗೆರೆ ಕಾಂಗ್ರೆಸ್ ಶಾಸಕ ನಯನ ಮೋಟಮ್ಮ ಅವರ ಬಟ್ಟೆಯ ಬಗ್ಗೆ ವೈಯಕ್ತಿಕ ಇನ್ಸ್ಟಾಗ್ರಾಮ್ ಖಾತೆಯಲ್ಲಿನ ಪೋಸ್ಟ್ ಗಳಿಗೆ ಅಶ್ಲೀಲವಾಗಿ ಕಿಡಿಗೇಡಿಗಳು ಕಮೆಂಟ್ ಹಾಕಿದ್ದಾರೆ. ವೇಶ್ಯೆ ಎಂದು ಕಮೆಂಟ್ ಮಾಡಿದ್ದಾರೆ ಎಂದು ನಯನ ಮೊಟ್ಟಮ್ಮ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಎರಡು ಅಧಿಕೃತ ಖಾತೆ ಹೊಂದಿರುವ ನಯನ ಮೊಟಮ್ಮ ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಕೊಳ್ಳಲು ಪ್ರತ್ಯೇಕ ಖಾತೆ ಹೊಂದಿದ್ದು, ಇನ್ನೂ ವೈಯಕ್ತಿಕ ವಿಚಾರ ಹಂಚಿಕೊಳ್ಳಲು ಮತ್ತೊಂದು ಖಾತೆ ಹೊಂದಿದ್ದಾರೆ. ಪ್ರವಾಸ ಮತ್ತು ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಖಾತೆಯಲ್ಲಿ ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ ಎಂದು ಶಾಸಕಿ ನಯನ ಮೊಟಮ್ಮ ಗಂಭೀರವಾಗಿ ಆರೋಪಿಸಿದ್ದಾರೆ.








