ಬೆಂಗಳೂರು : ಇತ್ತೀಚಿಗೆ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಶಾ ಸಭೆಯ ವಿಚಾರವಾಗಿ ಆರ್ ಅಶೋಕ್ ಮಾತನಾಡಿ, 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರೆವು ಜಾಸ್ತಿ ಆಗಿದೆ. ಏನೇನೋ ಮಾತನಾಡುತ್ತಾರೆ. ಎಸ್‌ಪಿಗೆ ಹೊಡೆಯಲು ಹೋಗುತ್ತಾರೆ. ಮನಮೋಹನ್ ಸಿಂಗ್ ಪುಣ್ಯಾತ್ಮ ಗೊಂಬೆ ತರಹ ಇದ್ದವರು. 10 ವರ್ಷದಲ್ಲಿ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದಾರೆ? ಡಾ. ಮನಮೋಹನ್ ಸಿಂಗ್ ಅವರಿಗಿಂತ ಮೋದಿ 4 ಪಟ್ಟು ಹೆಚ್ಚು ಹಣ ಕೊಟ್ಟಿದ್ದಾರೆ.
ರಾಜ್ಯದ ಜನರ ಮೇಲೆ ತೆರಿಗೆ ಹಾಕಿ ಸುಲಿಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಔಟ್ ಗೋಯಿಂಗ್ ಸರ್ಕಾರ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಆಡಳಿತಕ್ಕೆ ಬರಲು ಆಗಲ್ಲ. 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರವಾದ ಆರೋಪ ಮಾಡಿದರು.
ಡಿಕೆ ಶಿವಕುಮಾರ್ ಗೆ ಏನು ಲಾಭ ಆಗುತ್ತೋ ಅದನ್ನು ಮಾಡಿದ್ದಾರೆ. ಅವರ ಲಾಭಕ್ಕಾಗಿ ರಾಮನಗರ ಕನಕಪುರ ಜನರನ್ನು ಎತ್ತಿಕಟ್ಟುತ್ತಿದ್ದಾರೆ. ರಾಜಭವನದಲ್ಲಿ ನಮ್ಮ ಹೋರಾಟ ಏನು ಬೇಕು ಮಾಡಿದ್ದೇವೆ. ನಾವು ಇನ್ಮುಂದೆ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ. ಚುನಾವಣೆ ಮುಂದೂಡಬೇಕೆಂಬ ಕಾರಣಕ್ಕೆ ಕಾನೂನು ತಿದ್ದುಪಡಿ ಮಾಡಿದ್ದಾರೆ. ಮೊದಲು ಬೆಂಗಳೂರಿನಲ್ಲಿ ಗಬ್ಬೆದ್ದು ನಾರುತ್ತಿರುವ ಕಸ ತೆಗೆಯಿರಿ. ನಿಮಗೆ ಒಂದೇ ಒಂದು ಗುಂಡಿ ಮುಚ್ಚುವಂತಹ ಯೋಗ್ಯತೆ ಇಲ್ಲ. ಬೆಂಗಳೂರು ಒಡೆದರೆ ಜನರ ಶಾಪ ನಿಮ್ಮನ್ನು ತಟ್ಟದೇ ಬಿಡಲ್ಲ.
ನಮ್ಮ ನೀರು ನಮ್ಮ ಹಕ್ಕು ಮೇಕೆದಾಟು ಪಾದಯಾತ್ರೆ ಮಾಡಿದರು. ಮೇಕೆದಾಟು ಪಾದಯಾತ್ರೆ ಏನಾಯ್ತು? ತಮಿಳುನಾಡಿನ ಯಾವನೋ ಮೇಕೆಯನ್ನು ಹಿಡಿದುಕೊಂಡು ಹೋದ. ಮೇಕೆದಾಟು ದೆಹಲಿಗೆ ಹೊರಟು ಹೋಯಿತು ಎಂದು ಆರ್ ಅಶೋಕ್ ವ್ಯಂಗ್ಯವಾಡಿದರು.ತಮಿಳುನಾಡಿನವರ ಜೊತೆಗೆ ಬಿರಿಯಾನಿ ತಿನ್ನುವಾಗ ಹೆಚ್ಚಿಗೆ ಕೊಡಬೇಕಿತ್ತು. ಒಂದು ಬಿರಿಯಾನಿ ಹೆಚ್ಚಾಗಿ ಕೊಟ್ಟು ಸಹಿ ಹಾಕಿಸಿಕೊಳ್ಳಬೇಕಾಗಿತ್ತು. ಅಂಬೂರ್ ಧಮ್ ಬಿರಿಯಾನಿ ಬದಲು ತಾಜ್ ಬಿರಿಯಾನಿ ಕೊಡಿ. ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಆರತಿ ಮಾಡಿದ್ದೆ ಮಾಡಿದ್ದು. ಪುಣ್ಯಾತ್ಮ ತಮಿಳುನಾಡು ಸಿಎಂ ಸ್ಟಾಲಿನ್ ಗೆ ಹೋಗಿ ಆರತಿ ಮಾಡಿ. ಡಿಕೆ ಶಿವಕುಮಾರ್ ಮತ್ತೆ ಕನಕಪುರದಿಂದ ತಮಿಳುನಾಡಿನವರೆಗೆ ಪಾದಯಾತ್ರೆ ಮಾಡಲಿ ಎಂದು ಆರ್ ಅಶೋಕ್ ತಿಳಿಸಿದರು.