ಹುಬ್ಬಳ್ಳಿ : ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ಆಕ್ಷೇಪಾರ್ಹ ಪದ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಎಂಎಲ್ಸಿ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಮೂರು ಜಿಲ್ಲೆಗಳನ್ನು ಸುತ್ತಾಡಿಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಸಿಟಿ ರವಿ ಅವರನ್ನು ಫೇಕ್ ಎನ್ಕೌಂಟರ್ ಮೂಲಕ ಮುಗಿಸುವ ಉದ್ದೇಶ ಪೊಲೀಸರು ಹೊಂದಿದ್ದರೋ ಏನೋ ಎಂದು ಕೇಂದ್ರ ಸಚಿವ ಪ್ರವಾಹ ಜೋಶಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಇತ್ತು. ನಾನು ನಿನ್ನೆಯೂ ಹೇಳಿದೆ ಇವತ್ತು ಕೂಡ ಹೇಳುತ್ತೇನೆ. ಯಾವ ಉದ್ದೇಶ ಇರದಿದ್ದರೆ ಕಬ್ಬಿನ ಗದ್ದೆಗೆ ಯಾಕೆ ಕರೆದುಕೊಂಡು ಹೋದರು? ಮಾಧ್ಯಮದವರು ಇರದೆ ಹೋಗಿದ್ದರೆ ಏನು ಆಗುತ್ತಿತ್ತೋ ಏನೋ ಸಿಟಿ ರವಿ ಕೂಡ ಕೊಲ್ಲುವ ಸಂಚು ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಸಿಟಿ ರವಿ ಹೇಳಿಕೆಯ ಆಧಾರದ ಮೇಲೆ ನಾನು ಮಾತನಾಡಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಅವಕಾಶ ಸಿಕ್ಕರೆ ಸಿಟಿ ರವಿ ಮಗಿಸಬೇಕು ಎಂಬ ಉದ್ದೇಶವಿತ್ತು. ಆದರೆ ಸರಿಯಾದ ಅವಕಾಶ ಸಿಕ್ಕಿಲ್ಲ ಎಂದು ಬಾಗಲಕೋಟೆಯಲ್ಲಿ ಕೇಂದ್ರ ಸಚಿವರು ಗಂಭೀರವಾದ ಆರೋಪ ಮಾಡಿದರು. ನಮ್ಮ ಎಂಎಲ್ಸಿ ಕೇಶವ ಪ್ರಸಾದ್ ಕೂಡ ಅವರ ಹಿಂದೆ ಇದ್ದರೂ ನಮಗೆ ಸಿಟಿ ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು ಎಂದು ಹೇಳಿದರು.
ಕೆಲವು ಮಾಧ್ಯಮದವರು ಕೂಡ ಅವರ ಬೆನ್ನು ಹತ್ತಿದ್ದರು. ಇಲ್ಲದಿದ್ದರೆ ಸಿಟಿ ರವಿ ಅವರನ್ನು ಫೇಕ್ ಎನ್ಕೌಂಟರ್ ಮಾಡುತ್ತಿದ್ದರು ಏನು ಬೇಕೆನ್ ಕೌಂಟರ್ ಮಾಡುವ ವಿಚಾರ ಪೊಲೀಸರಿಗೆ ಎತ್ತು ಅನಿಸುತ್ತದೆ ಈ ಬಗ್ಗೆ ನಾವು ಸುಮ್ಮನೆ ಕೂರುವುದಿಲ್ಲ ಹೋರಾಟ ಮಾಡುತ್ತೇವೆ ನಾವು ಏನು ಮಾಡಬೇಕು ಅದನ್ನು ನಾವು ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.