ಬೆಳಗಾವಿ : ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆ ಸುಲಭವಾಗಿ ಬಿಡುವುದಿಲ್ಲ ಬಿವೈ ವಿಜಯೇಂದ್ರ ಡಿಕೆ ಶಿವಕುಮಾರ್ ರನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದ. ಬಿಜೆಪಿ ಅಧ್ಯಕ್ಷ ಕಾಂಗ್ರೆಸ್ ಅಧ್ಯಕ್ಷ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಮುಂದೆ ಕೂಡ ಚರ್ಚೆ ಆಗಿತ್ತು. ಸಿಎಂ ಡಿಸಿಎಂ ಎಲ್ಲವು ವ್ಯಾಪಾರ ಆಗಿತ್ತು ಆದರೆ ಅಮಿತ್ ಶಾ ಒಪ್ಪಿಲ್ಲ ಎಂದು ಶಾಸಕ ಯತ್ನಾಳ್ ಸ್ಪೋಟಕ ಆರೋಪ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಅವರು ಇವರ ಜೊತೆಗೆ ಡಿಕೆ ಶಿವಕುಮಾರ್ ಜೊತೆ ಸರ್ಕಾರ ಮಾಡುವುದು ಬೇಡ ಇದು ನಮ್ಮ ಬಿಜೆಪಿ ಸಂಸದರಿಂದ ಮಾಹಿತಿ ಬಂದಿರುವುದು. ಅಮಿತ್ ಶಾ ಅವರ ಮುಂದೆ ಈ ಕುರಿತು ಚರ್ಚೆಯಾಗಿದ್ದು ಅವರು ಒಪ್ಪಿಲ್ಲ. ದೆಹಲಿಯಲ್ಲಿ 28 ಕಿಲೋಮೀಟರ್ ದೂರದಲ್ಲಿ ನೋಯ್ಡಾ ರಸ್ತೆಯಲ್ಲಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ಸಿಎಂ ಹಾಗೂ ಡಿಸಿಎಂ ಆಗುವ ವಿಚಾರವಾಗಿ ಚರ್ಚೆ ಮಾಡಿದರು. ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೆಂದ್ರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇದ್ರು ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ








