ಕಲಬುರ್ಗಿ : ಇತ್ತೀಚಿಗೆ ಚಿತ್ರದುರ್ಗ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈದ್ ಮಿಲಾದ್ ಹಬ್ಬದ ದಿನದಂದು ಕೆಲವು ಕಿಡಿಗೇಡಿಗಳು ಪ್ಯಾಲೇಸ್ಥಿನ್ ಧ್ವಜ ಹರಾಟ ನಡೆಸಿದ್ದರು. ಈ ವಿಚಾರವಾಗಿ ಇಂದು ಕಲಬುರ್ಗಿಯಲ್ಲಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿ, ಪ್ಯಾಲೇಸ್ಥಿನ್ ಧ್ವಜ ಹಿಡಿದು ಮೆರವಣಿಗೆ ಮಾಡಿದರೆ ತಪ್ಪೇನಿಲ್ಲ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ಯಾಲೇಸ್ಥಿನ್ ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದೆ. ವಿ ಆರ್ ವಿತ್ ಪ್ಯಾಲೇಸ್ಥಿನ್ ಎಂದು ಕೇಂದ್ರ ಸರ್ಕಾರ ಹೇಳಿದೆ. ಹಾಗಾಗಿ ಯಾರೋ ಧ್ವಜ ಹಿಡಿದು ಮೆರವಣಿಗೆ ಮಾಡಿದ್ದಾರೆ. ಅದರಲ್ಲಿ ತಪ್ಪೇನು ಇಲ್ಲ ಅಂತ ಅನಿಸುತ್ತದೆ ಎಂದು ಅವರು ತಿಳಿಸಿದರು.
ಬೇರೆ ದೇಶದ ಪರ ಘೋಷಣೆ ಕೂಗಬಾರದು. ಘೋಷಣೆ ಕೂಗಿದರೆ ಅಂಥವರು ದೇಶದ್ರೋಹಿ ಕೆಲಸ ಮಾಡಿದಂತೆ ಆಗುತ್ತದೆ. ಘೋಷಣೆ ಕೂಗಿದವರು ಯಾರೇ ಇರಲಿ ಗಲ್ಲು ಶಿಕ್ಷೆಯಾಗಬೇಕು. ನಾನು ಮೊದಲು ಹಿಂದೂಸ್ತಾನಿ, ಆಮೇಲೆ ಕನ್ನಡಿಗ. ಅದಾದಮೇಲೆ ಮುಸ್ಲಿಂ. ಯಾರೇ ಆದರೂ ಬೇರೆ ದೇಶದ ಪರ ಘೋಷಣೆ ಕೂಗಬಾರದು ಎಂದು ತಿಳಿಸಿದರು.