ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ಆಪರೇಷನ್ ಸಿಂಧೂರ ದಾಳಿ ಮಾಡಿದ್ದು ಈ ಒಂದು ದಾಳಿಯ ಕುರಿತಂತೆ ಇದೀಗ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಉನ್ನತ ಕಮಾಂಡರ್‌ಗಳು ಆಪರೇಷನ್ ಸಿಂಧೂರ್ ಕುರಿತು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಆಪರೇಷನ್ ಸಿಂಧೂರ್ ಕುರಿತಂತೆ ಡಿಜಿಎಂಒ ರಾಜೀವ್ ಘಾಯ್ ಮಾತನಾಡಿ, ಪಹಲ್ಗಾಂ ನಲ್ಲಿ 26 ಅಮಾಯಕರನ್ನು ಬಲಿಪಡೆದಿದ್ದ ಉಗ್ರರನ್ನು ಸದೆಬಡಿಯಲು, ಅದರ ಪ್ರತಿಕಾರವಾಗಿ ಭಾರತದಿಂದ ಆಪರೇಷನ್ ಸಿಂಧೂರ್ ನಡೆಸಲಾಗಿದೆ. ಉಗ್ರರನ್ನು ಸದೆಬಡಿಯಲುಆಪರೇಷನ್ ಸಿಂಧೂರ್ ನಡೆಸಲಾಗಿತ್ತು. ಉಗ್ರರ ನೆಲೆಗಳನ್ನು ಧ್ವಂಸ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಆಪರೇಷನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದ್ದೇವೆ.
ಉಗ್ರರು ತಮ್ಮ ಶಿಬಿರಗಳಿಂದ ಪರಾರಿ ಯಾಗಿದ್ದರು. ನಮ್ಮ ದಾಳಿಗೆ ಹೆದರಿ ಉಗ್ರರು ಪರಾರಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಉಗ್ರರ ಅಡಗುತಾಣಗಳನ್ನು ನಾವು ನಾಶ ಮಾಡಿದ್ದೇವೆ. ನಮ್ಮ ಗುರಿ ಕೇವಲ ಉಗ್ರರ ಅಡಗುತಾಣವಾಗಿತ್ತೆ ಹೊರತು, ನಾಗರಿಕರು ಆಗಿರಲಿಲ್ಲ. ಪಿಓಕೆ ಮತ್ತು ಪಾಕಿಸ್ತಾನಕ್ಕೆ ಒಳನುಗ್ಗಿ 9 ಉಗ್ರರ ಅಡಗುತಾಣಗಳನ್ನು ನಾಶ ಮಾಡಿದ್ದೇವೆ. ಪಾಕಿಸ್ತಾನ ಹಲವು ಉಗ್ರರಿಗೆ ಆಶ್ರಯ ಕೊಟ್ಟಿದೆ. ಆಪರೇಷನ್ ಸಿಂಧೂರಿನಲ್ಲಿ ನಾಶ ಮಾಡಿದ ಸಾಕ್ಷಿಗಳನ್ನು ತಂದಿದ್ದೇವೆ ಪಾಕಿಸ್ತಾನದಲ್ಲಿ ಹಾನಿಯಾದ ಬಗ್ಗೆ ಸೂಕ್ತ ಪುರಾವೆಗಳು ನಮ್ಮ ಬಳಿ ಇವೆ.
ಪಾಕಿಸ್ತಾನ ಹಲವು ಉಗ್ರರಿಗೆ ಆಶ್ರಯ ನೀಡಿದೆ. ಡೇವಿಡ್ ಹೆಡ್ಲಿ, ಕಸಬ್ ಸೇರಿದಂತೆ ಮೋಸ್ಟ್ ವಾಂಟೆಡ್ ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡಿದೆ. ಉಗ್ರ ಅಬ್ದುಲ್ ಮಲಿಕ್ ನನ್ನು ಸಹ ಹೊಂದಿದ್ದೇವೆ. ಉಗ್ರರ 9 ನೆಲೆಗಳನ್ನು ಆಪರೇಷನ್ ಸಿಂಧೂರ ಮೂಲಕ ಧ್ವಂಸ ಮಾಡಿದ್ದೇವೆ ನೂರಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿದ್ದೇವೆ.ಭಾರತದ ಮಿಲಿಟರಿ ನೆಲೆ ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿ ಮಾಡಿದೆ. ನಾಗರೀಕರನ್ನು ಗುರಿಯಾಗಿಸಿ ಡ್ರೋನ್ ದಾಳಿ ಮಾಡಿದೆ. ದಾಳಿಯ ಪ್ಲಾನ್ ಹೇಗಿತ್ತು ಎನ್ನುವುದನ್ನು ಹೇಳಲಾಗಲ್ಲ. ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿದೆ. ಪ್ರತಿಯೊಂದು ದಾಳಿಗೂ ವಿಡಿಯೋ ಸಾಕ್ಷಿ ಇದೆ. ಆಪರೇಷನ್ ಸಿಂಧೂರಿಗೆ ವಿಡಿಯೋ ಸಾಕ್ಷಿ ಇದೆ. ಉಗ್ರರ ನೆಲೆಗಳನ್ನು ದ್ವಂಸ ಮಾಡಿರುವ ವಿಡಿಯೋ ಸಾಕ್ಷಿ ಇದೆ ಎಂದು ತಿಳಿಸಿದರು.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಸೇನೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್, ಭಾರತೀಯ ವಾಯುಪಡೆಯ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರ್ತಿ ಹಾಗು ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಉಪಸ್ಥಿತರಿದ್ದರು.