ಬೆಂಗಳೂರು : ಕಿಯೋನಿಕ್ಸ್ ನ ಹಗರಣಕ್ಕೆ ಸಂಬಂಧಪಟ್ಟಂತೆ, ಬಾಕಿ ಬಿಲ್ ಪಾವತಿಸದಿದ್ದರೆ, ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡನೆ ನೇರ ಹೊಣೆ ಎಂದು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ಈ ಒಂದು ಕಿಯೋನಿಕ್ಸ್ ನಲ್ಲಿ ಸುಮಾರು 500 ಕೋಟಿ ಅವ್ಯವಹಾರ ನಡೆದಿರಬಹುದು. ನಾಲ್ಕು ವರ್ಷಗಳ ವರದಿಯನ್ನು ಆಧರಿಸಿ ಅದರ ಪ್ರಕಾರ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕೌಂಟೆಂಟ್ ಜನರಲ್ ಯಾವುದೇ ಮಾನದಂಡ ಪಾಲಿಸದೆ ನೇಮಕಾತಿ ಮಾಡಿರುವ ಆರೋಪ ಇದೆ. ನಕಲಿ ಬಿಲ್ ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಪೂರೈಕೆ ಮಾಡಲಾಗಿದೆ. ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಸಾಮಗ್ರಿ ಪೂರೈಕೆ ಮಾಡಿರುವ ಆರೋಪ ಇದೆ. ಅಂದಾಜು 500 ಕೋಟಿ ಅವ್ಯವಹಾರ ಕಂಡುಬರುವ ಹಾಗಿದೆ ಎಂದರು.
ಕಳೆದ ನಾಲ್ಕು ವರ್ಷದ ಆಡಿಟರ್ ರಿಪೋರ್ಟ್ ಮಾಡಬೇಕಿದೆ. ಟೈಮ್ ಬೇಕು ವರದಿ ಆಧಾರದ ಮೇಲೆ ಕೊಡಲಾಗುತ್ತದೆ. ವರದಿ ಆಧಾರದ ಮೇಲೆ ವೆಂಡರ್ಸ್ ಗಳ ಬಾಕಿ ಬಿಲ್ ಪಾವತಿ ಮಾಡಲಾಗುತ್ತದೆ. ಆದರೆ ವೆಂಡರ್ಸ್ ಗಳು ಬ್ಲ್ಯಾಕ್ ಮೇಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಾವು ಭ್ರಷ್ಟಾಚಾರದಲ್ಲಿ ತೊಡಗಿದ್ದೇವೆ ಎಂದು ಎಲ್ಲೂ ಆರೋಪಿಸಿಲ್ಲ ಎಂದು ಅವರು ತಿಳಿಸಿದರು.